ಕುಂದಾಪುರ: ಬೈಕೊಂದು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟು, ಬೈಕ್ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ ಹೆಮ್ಮಾಡಿ-ವಂಡ್ಸೆ ರಸ್ತೆಯ ಮಲ್ಲಾರಿ ಬಳಿ ಸಂಭವಿಸಿದೆ.
ಮೃತ ಬೈಕ್ ಸವಾರ ಸಿಗಂದೂರಿನ ಶರತ್ (25) ಎಂದು ಗುರುತಿಸಲಾಗಿದೆ. ಸಿಗಂಧೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕೆಂಚನೂರು ಮಲ್ಲಾರಿ ಬಳಿ ರಸ್ತೆಯ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಹೋಗುತ್ತಿದ್ದ ಬಸ್ಸಿಗೆ ನೇರ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದು, ಘರ್ಷಣೆಯಿಂದ ಬೆಂಕಿ ಹತ್ತಿಕೊಂಡು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.