ಬಳ್ಳಾರಿ ರಾಜಕಾರಣಿಗಳಿಗೆ ಇಡಿ ಶಾಕ್

ಬಳ್ಳಾರಿ: ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ರೂ ಭ್ರಷ್ಟಾಚಾರ ಪ್ರಕರಣದ ಬಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತ್ರವಲ್ಲದೇ ಬಳ್ಳಾರಿ ಜಿಲ್ಲೆ ಇತರೆ ರಾಜಕಾರಣಿಗಳಿಗೂ ತಟ್ಟಿದೆ.
ಬುಧವಾರ ಬೆಳ್ಳಂ ಬೆಳಗ್ಗೆ ಬಳ್ಳಾರಿ ಲೋಕಸಭಾ ಸಂಸದ ಇ.ತುಕಾರಂ, ಬಳ್ಳಾರಿ ನಗರ ಶಾಸಕ‌ ನಾರಾ ಭರತರೆಡ್ಡಿ,‌ ಕಂಪ್ಲಿ ಶಾಸಕ ಜೆಎನ್ ಗಣೇಶ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ಕೆಲ ಘಂಟೆಗಳಿಂದ ಪ್ರತ್ಯೇಕ ತಂಡಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳು ದಾಖಲೆಗಳ ತಲಾಶ್ ನಡೆಸಿದ್ದಾರೆ ವಾಲ್ಮೀಕಿ ‌ನಿಗಮದಲ್ಲಿ ೮೭ ಕೋಟಿ‌ರೂ. ಗೂ ಹೆಚ್ಚು ಹಣ ದುರ್ಬಳಕೆ‌ ಪ್ರಕರಣ ಬೇಕಾಗಿತ್ತು. ಈ ಆರೋಪದಲ್ಲಿ ಶಾಸಕ ಬಿ.ನಾಗೇಂದ್ರ ತಮ್ಮ ಸಚಿವ‌ ಸ್ಥಾನವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೇ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ‌ ಎನ್ನುವ ಆರೋಪ ಕೇಳಿ ಬಂದಿದ್ದವು. ಅದರ ಹಿನ್ನೆಲೆಯಲ್ಲಿ ಬಳ್ಳಾರಿ ರಾಜಕಾರಣಿಗಳ ಮನೆ ಮೇಲೆ‌ ಇಡಿ ಅಧಿಕಾರಿಗಳು ಏಕ ಕಾಲಕ್ಕೆ ‌ದಾಳಿ ಮಾಡಿದ್ದಾರೆ.