ಫೋಲ್ಡಬಲ್ ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜು

ನವದೆಹಲಿ: ಜುಲೈ 9ರಂದು, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಫೋಲ್ಡಬಲ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ಹಲವು ವರ್ಷಗಳಿಂದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ನಿಜವಾಗಿಯೂ ಏನು ಬೇಕು ಎಂಬುದರ ಕಡೆಗೆ ಗಮನ ಹರಿಸಿ ತನ್ನ ಸಾಧನಗಳನ್ನು ವಿನ್ಯಾಸಗೊಳಿಸಿದೆ. ಉದಾಹರಣೆಗೆ ಉತ್ತಮ ಕಾರ್ಯಕ್ಷಮತೆ, ತೀಕ್ಷ್ಣವಾದ ಕ್ಯಾಮೆರಾಗಳು ಮತ್ತು ಕನೆಕ್ಟ್ ಆಗಿರಲು ಸ್ಮಾರ್ಟ್ ವಿಧಾನಗಳು ಮುಂತಾದ ಸೌಲಭ್ಯಗಳನ್ನು ಒದಗಿಸಿದೆ. ವಿಶೇಷವಾಗಿ ಗ್ಯಾಲಕ್ಸಿ ಎಐ ಒದಗಿಸಿದ್ದು, ಇದು ಸಾಧನಗಳು ಜೀವನ ಹೇಗೆ ಮಾಡಬಲ್ಲವು ಎಂಬುದನ್ನು ತೋರಿಸಿ ಕೊಟ್ಟಿದೆ.

ಎಐ ವೇಗವಾಗಿ ಹೊಸ ಯೂಸರ್ ಇಂಟರ್‌ಫೇಸ್ ಆಗುತ್ತಿರುವಂತೆ, ಇದು ನಾವು ತಂತ್ರಜ್ಞಾನದೊಂದಿಗೆ ಹೊಂದಿರುವ ಸಂಬಂಧವನ್ನು ಮರುವ್ಯಾಖ್ಯಾನಿಸುತ್ತಿದೆ. ಸ್ಮಾರ್ಟ್ ಫೋನ್‌ಗಳು ಇನ್ನು ಮುಂದೆ ಕೇವಲ ಆ್ಯಪ್‌ಗಳು ಮತ್ತು ಉಪಕರಣಗಳ ಸಂಗ್ರಹವಲ್ಲ, ಬದಲಿಗೆ ಬಳಕೆದಾರರ ಉದ್ದೇಶವನ್ನು ಅರ್ಥಮಾಡಿಕೊಂಡು ತಕ್ಷಣ ಪ್ರತಿಕ್ರಿಯಿಸುವ ಸ್ಮಾರ್ಟ್ ಅಸಿಸ್ಟೆಂಟ್ ಆಗಿ ವಿಕಸನಗೊಳ್ಳುತ್ತಿದೆ. ಈ ರೂಪಾಂತರವು ನಮ್ಮನ್ನು ಪ್ರತಿಕ್ರಿಯೆಯಿಂದ ನಿರೀಕ್ಷೆ ಕಡೆಗೆ ಕರೆದುಕೊಂಡು ಹೋಗುತ್ತದೆ.

ಮುಂದಿನ ತಲೆಮಾರಿನ ಗ್ಯಾಲಕ್ಸಿ ಸಾಧನಗಳನ್ನು ಹೊಸ ಎಐ-ಚಾಲಿತ ಇಂಟರ್‌ಫೇಸ್ ಮೂಲಕ ಮರುವಿನ್ಯಾಸಗೊಳಿಸಲಾಗುತ್ತಿದೆ, ಇದಕ್ಕೆ ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಲು ವಿನ್ಯಾಸಗೊಳಿಸಲಾದ ಅತ್ಯುನ್ನತ ಹಾರ್ಡ್‌ವೇರ್‌ನ ಬೆಂಬಲವಿದೆ. ಈ ಭವಿಷ್ಯದ ಉತ್ಪನ್ನವು ಶೀಘ್ರವೇ ಹೊರ ಬರಲಿದೆ, ಮತ್ತು ಗ್ಯಾಲಕ್ಸಿ ಎಐ ಮತ್ತು ಸ್ಯಾಮ್‌ಸಂಗ್‌ನ ಕರಕುಶಲತೆಯ ಅತ್ಯುತ್ತಮ ಉತ್ಪನ್ನ ಶೀಘ್ರದಲ್ಲೇ ರಿವೀಲ್ ಆಗಲಿದೆ.