ಫೆಕ್‌ ಲಿಂಕ್‌ ಒತ್ತಿ: ಹಣ ಕಳೆದುಕೊಂಡ ಗುತ್ತಿಗೆದಾರ

ಹಾವೇರಿ: ಎಸ್‌ಬಿಐ ಯೊನೊ ಎಪಿಕೆ ಫೈಲ್‌ನ್ನು ಒತ್ತಿದ್ದರಿಂದ ಅನಾಮಧೇಯ ವ್ಯಕ್ತಿಗಳು ಸಿವಿಲ್ ಗುತ್ತಿಗೆದಾರರೊಬ್ಬರ ಖಾತೆಯಲ್ಲಿದ್ದ ಸುಮಾರು 1,26,383 ರೂ.,ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಎಸಗಿದ ಘಟನೆ ನಡೆದಿದೆ.
ಸವಣೂರ ತಾಲೂಕು ಹತ್ತಿಮತ್ತೂರ ಗ್ರಾಮದ ಸಿವಿಲ್ ಗುತ್ತಿಗೆದಾರ ದೌಲತ್‌ಸಾಹೇಬ್ ಮುಲ್ಲಾ ಎಂಬುವವರೆ ಹಣ ಕಳೆದುಕೊಂಡವರು. ಗುತ್ತಿಗೆದಾರನು ತನ್ನ ವಾಟ್ಸಾಪ್‌ನಲ್ಲಿ ಬಂದಿದ್ದ ಎಸ್‌ಬಿಐ ಯೊನೊ ಎಪಿಕೆ ಫೈಲ್‌ನ್ನು ಡಿಲೀಟ್ ಮಾಡಲು ಒತ್ತಿದ್ದರಿಂದ ಅನಾಮಧೇಯರು ಮೊಬೈಲ್ ನಿಯಂತ್ರಣಕ್ಕೆ ತೆಗೆದುಕೊಂಡು ಖಾತೆಯಲ್ಲಿದ್ದ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.