ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ

F2 MONACO ರೇಸ್​ನಲ್ಲಿ ಇತಿಹಾಸ ನಿರ್ಮಿಸಿದ ಬೆಂಗಳೂರಿಗ

ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ 2 ಸ್ಪ್ರಿಂಟ್ ರೇಸ್‌ನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಬೆಂಗಳೂರಿನ ಕುಶ್ ಮೈನಿ ಪಾತ್ರರಾಗಿದ್ದಾರೆ,

ಶನಿವಾರ ನಡೆದ ಸ್ಪ್ರಿಂಟ್‌ ರೇಸ್‌ನಲ್ಲಿ ಕುಶ್‌ ಮೈನಿ ಅಮೋಘ ಸಾಧನೆ ಮಾಡಿದರು. ಡಿಎಎಮ್‌ಎಸ್‌ ಲ್ಯೂಕಾಸ್ ಆಯಿಲ್ ತಂಡಕ್ಕಾಗಿ ರೇಸ್‌ ಮಾಡುವ ಕುಶ್‌, ಆರಂಭದಿಂದಲೂ ಪೋಲ್‌ ಪೋಸಿಷನ್‌ನಿಂದ ಆರಂಭಿಸಿ 30 ಲ್ಯಾಪ್‌ಗಳ ಸರ್ಕಿಟ್‌ನ್ನು 44.57 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು. ಫಾರ್ಮುಲಾ 2 ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್‌ಸ್ಪೋರ್ಟ್ ಜಗತ್ತಿನಲ್ಲಿ ಭವಿಷ್ಯದ ಫಾರ್ಮುಲಾ 1 ಚಾಂಪಿಯನ್‌ಗಳನ್ನು ಸಿದ್ಧಪಡಿಸುವ ವೇದಿಕೆಯಾಗಿದೆ.