ಕುಷ್ಟಗಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದ ವೇಳೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ. ಇನ್ನೂ ಹಲವರು ಅಸ್ವಸ್ಥರಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಪ್ರಚಾರದ ಹುಚ್ಚಿನಿಂದ ದುರ್ಘಟನೆ ನಡೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ,
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹುಚ್ಚು ಬಂದುಬಿಟ್ಟಿದೆ,ಏನಾದರೂ ಮಾಡಿ ನಾನು ಹೆಚ್ಚು ಜನಪ್ರಿಯ ಆಗಬೇಕೆಂಬ ಹುಚ್ಚು ಭ್ರಮೆಯಲ್ಲಿ ಡಿ.ಕೆ ಶಿವಕುಮಾರ್ ಇದ್ದಾರೆ.ಅವರ ಹುಚ್ಚಿಗೆ 11 ಜನ ಅಮಾಯಕರು ಬಲಿಯಾಗಿದ್ದಾರೆ ಇನ್ನು ಎಷ್ಟು ಜನ ಸಾಯುತ್ತಾರೆ ಎಂಬುದು ಮಾತ್ರ ಇನ್ನೂ ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ ಸಾವನಪ್ಪಿದ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದರು.
ಉಪಮುಖ್ಯಮಂತ್ರಿಯ ಡಿ.ಕೆ.ಶಿವಕುಮಾರ್ ಅವರು ವಿಜಯೋತ್ಸವ ಆಚರಿಸುತ್ತೇವೆ ಎಂದು ಘೋಷಣೆ ಮಾಡಿದರು ಆದರೆ ಪೊಲೀಸ್ ಇಲಾಖೆ ಅಧಿಕಾರಿಗಳು
ಮಾತ್ರ ಒಂದು ದಿನದಲ್ಲಿ ವಿಜಯೋತ್ಸವ ಆಚರಿಸುವುದಕ್ಕೆ ತೊಂದರೆ ಆಗುತ್ತದೆ ಹೀಗಾಗಿ ಬೇಡ ಎಂದು ಹೇಳಿದ್ದಾರೆ.ಆದರೂ ಸಹ ನಾನು ಹೇಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ಅವರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಈಗ ಅವಘಡಕ್ಕೆ ನೇರವಾಗಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. 11 ದಿನ ಸತ್ತಿರುವುದು ಮಹಾ ದುರಂತವಾಗಿದೆ. ಈ ನಿಟ್ಟಿನಲ್ಲಿ ಸಾವನಪ್ಪಿದ ವ್ಯಕ್ತಿಗಳಿಗೆ ಸಂತಾಪ ಸೂಚಿಸುತ್ತೇನೆ.
ಮೃತಪಟ್ಟಂತಹ ವ್ಯಕ್ತಿಗಳ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದು ಇನ್ನು ಹೆಚ್ಚಿಗೆ ಘೋಷಿಸಬೇಕು ಎಂದರು.