ಪೇದೆಗಳ‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ‌ಮೇಲೆ ಫೈರಿಂಗ್

ಬಳ್ಳಾರಿ: ಹಲವು ಕಳ್ಳತನ, ಮರ್ಡರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಪಂಚನಾಮೆ ವೇಳೆ ಪೇದೆಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ‌ ವೇಳೆ ಪೊಲೀಸರು ಆತನ ಮೇಲೆ ಫೈರಿಂಗ್ ಮಾಡಿದ ಘಟನೆ ಸಿರುಗುಪ್ಪ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿರುರುಪ್ಪ ಪೊಲೀಸರಿಂದ ಕುಖ್ಯಾತ ಕಳ್ಳ ಅಮರೇಶ್ ಮೋಡಿಕರ್ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಸಿರುಗುಪ್ಪ ಸಿಪಿಐ ಹನುಮಂತಪ್ಪ ಅವರಿಂದ ಆರೋಪಿ ಬಲಗಾಲಿಗೆ ಗುಂಡೇಟು.
ಕಳ್ಳತನ ಪ್ತಕರಣದ ಮಹಜರ್ ಗೆ ಕರೆದುಕೊಂಡು ಹೋದಾಗ ಕಾನ್ಸಟೇಬಲ್ ಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿನಿದ ಕುಖ್ಯಾತ ಕಳ್ಳ. ವಿರುಪಾಕ್ಷ್ ಗೌಡ ಮಾರುತಿ ಎನ್ನುವ ಪೇದೆಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ ಅಮರೇಶ್ ಮೋಡಿಕರ್. ಸಿರುಗುಪ್ಪ ಸಿಪಿಐ ಹನುಮಂತಪ್ಪ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟರೂ ಆರೋಪಿ ಹಲ್ಲೆ ಮುಂದುವರಿಸಿದ್ದು, ಕೂಡಲೇ ಆತ್ಮರಕ್ಷಣೆಗೆ ಸಿಪಿಐ ಹನುಮಂತಪ್ಪ ಅವರಿಂದ ಆರೋಪಿ ಬಲಗಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಆರೋಪಿ ಹಾಗೂ ಹಲ್ಲೆಗೊಳಗಾದ ಕಾನ್ಸಟೇಬಲ್ಸ್‌ಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಅಮರೇಶ್ ವಿರುದ್ದ 30 ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಕಳ್ಳತನ ಮಾತ್ರವಲ್ಲದೇ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಕರ್ನಾಟಕ ಹಾಗೂ ಆಂದ್ರದ ಎರಡೂ ರಾಜ್ಯದಲ್ಲಿ ಕಳ್ಳತನ ಮಾಡುವಾಗ ಕೊಲೆ ಮಾಡಿದ್ದ ಆರೋಪಿ.‌ಎರಡು ಮರ್ಡರ್, 6 ಡಕಾಯಿತಿ, 13 ಎಟಿಎಂ ಕಳ್ಳತನ ದಲ್ಲಿ ಭಾಗಿಯಾದ ಕೇಸ್‌ಗಳಿವೆ. ಆಸ್ಪತ್ರೆ ಎಸ್ಪಿ ಡಾ.ಶೋಭಾ ರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.