ಮೈಸೂರು: ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ ಮಾಡಿದ್ದು ತಪ್ಪಾಗಿದೆ. ೧೧ ಜನ ನಮ್ಮವರನ್ನ ಕಳೆದುಕೊಂಡಿದ್ದೇವೆ ಎಂದು ಶಾಸಕ ಶ್ರೀ ವತ್ಸ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಕದ ಆಂಧ್ರದಲ್ಲಿ ಕಾಲ್ತುಳಿದ ಆದಾಗ ನಟ ಅಲ್ಲು ಅರ್ಜನ್ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಕ್ಕದ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಆದರೆ ಇಲ್ಲಿಯವರೆಗೆ ನಮ್ಮ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮೃತ ಪಟ್ಟವರು ಕುಟುಂಬಸ್ಥರು ಶಾಪ ತಟ್ಟೇ ತಟ್ಟುತ್ತೆ ಎಂದರು.
ವಿಧಾನಸೌಧಕ್ಕೆ ಯಾಕೆ ಆಟಗಾರನ್ನ ಕರೆದುಕೊಂಡು ಹೋದರು, ಈ ಸಾವಿನ ಹೊಣೆಯನ್ನ ಸರ್ಕಾರವೇ ಹೊತ್ತು ಕೊಳ್ಳಬೇಕು. ವಿಜಯೋತ್ಸವಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದೆ. ವಿಶ್ವಕಪ್ ಗೆದ್ದಾದ ಮಹಾರಾಷ್ಟ್ರದಲ್ಲಿ ೨೦ ಲಕ್ಷ ಜನ ಸೇರಿದ್ರು. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ಈಗಾಗಲೇ ಕೊಡಬೇಕಿತ್ತು.
ಬಿಜೆಪಿ ಈ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿಲ್ಲ. ಕುಂಭಮೇಳದಲ್ಲಿ ಘಟನೆ ನಡೆದಾಗ ಕಾಂಗ್ರೆಸ್ ಯಾವ ರೀತಿ ಟೀಕೆ ಮಾಡಿತ್ತು. ೬೦ ಕೋಟಿ ಜನ ಕುಂಭಮೇಳಕ್ಕೆ ಹೋಗಿದ್ರು. ಪೊಲೀಸರ ಬಗ್ಗೆ ಯಾಕೆ ಟೀಕೆ ಮಾಡುತ್ತೀರಾ. ಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.