ಗದಗ: ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 27 ಜನರನ್ನು ಹತ್ಯೆ ಮಾಡಿದ ಭಯೋತ್ಪಾದಕರ ಕೃತ್ಯ ಅಮಾನವೀಯವಾಗಿದೆ. ಭಾರತದ ಕಡೆಗೆ ಕಣ್ಣೆತ್ತಿ ನೋಡಿದರೆ ಸಹಿಸಲಾಗುವುದಿಲ್ಲ. ಭಾರತ ಯುದ್ಧದ ತಯಾರಿ ಮಾಡಿಕೊಳ್ಳುತ್ತಿದೆ. ನಾವೆಲ್ಲರೂ ಯುದ್ಧಕ್ಕೆ ಸನ್ನದ್ಧರಾಗಿದ್ದೇವೆ ಎಂದು ಕಾನೂನು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಮಂಗಳವಾರ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪದೇ ಪದೇ ಭಯೋತ್ಪಾದನೆಯುಂಟು ಮಾಡಿ ದೇಶದ ಆಂತರಿಕ ಭದ್ರತೆಗೆ ಧಕ್ಕೆಯೊಡ್ಡಲಾಗುತ್ತಿದೆ. ಭಾರತ-ಪಾಕಿಸ್ತಾನ ಯುದ್ಧ ಅನಿವಾರ್ಯವಾಗಿದೆ. ಈ ಹಿಂದೆಯೂ ಸಹ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದೇವೆ. ದೇಶ ಒಂದಾಗಿದೆ. ಒಕ್ಕಟ್ಟಿನಿಂದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋಣ ಎಂದು ಹೇಳಿದರು.
ಜಗತ್ತಿನಲ್ಲೇ ಭಾರತದಂತಹ ಶಿಸ್ತಿನ ದೇಶ ಮತ್ತೊಂದಿಲ್ಲ ಎಂಬ ಕೀರ್ತಿ ಪತಾಕೆ ಹಾರಿಸೋಣ. ಈ ಹಿಂದೆ ಬಾಂಗ್ಲಾ ದೇಶ ಪ್ರತ್ಯೇಕಗೊಳಿಸಿದಾಗ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯಾವ ವಾತಾವರಣ ಸೃಷ್ಟಿಯಾಗಿತ್ತೋ ಅದೇ ವಾತಾವರಣ ಇರಲಿದೆ. ಯುದ್ಧ ಪ್ರಾರಂಭವಾಗಲಿ, ಆಗದಿರಲಿ. ನಾವೆಲ್ಲರೂ ಒಂದು ಧ್ವನಿಯಾಗಿ ಇರಬೇಕಾಗಿದೆ. ದೇಶದ ಪ್ರಶ್ನೆ ಬಂದಾಗಿ 140 ಕೋಟಿ ಜನ ನಾವು ಒಂದಾಗಿದ್ದೇವೆ. ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸುತ್ತೇವೆ ಎಂದರು.