ನೇರಸೆ ಅರಣ್ಯದಲ್ಲಿ ಕಡವೆ ಬೇಟೆ: 9 ಮಂದಿ ಬಂಧನ

ಬೆಳಗಾವಿ: ಲೋಂಡಾ ವಲಯದ ನೇರಸೆ ಬೀಟ್‌ನಲ್ಲಿ ಒಂದು ಕಡವೆಯನ್ನು ಬೇಟೆಯಾಡಿದ ಪ್ರಕರಣದಲ್ಲಿ 9 ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ನೇರಸೆ ನಿವಾಸಿಗಳಾದ ರಂಜಿತ್ ಜೈಸಿಂಗ್ ದೇಸಾಯಿ, ಬಲವಂತ ನಾರಾಯಣ ದೇಸಾಯಿ, ಆತ್ಮಾರಾಮ ಯಲ್ಲಪ್ಪ ದೇವಳಿ, ಪ್ರಮೋದ ನಾಮದೇವ ದೇಸಾಯಿ, ದತ್ತರಾಜ ವಿಲಾಸ ಹವಾಲ್ದಾರ, ಜ್ಞಾನೇಶ ಮಂಗೇಶ ಗಾವಡೆ, ಗೋವಿಂದ ರಾಮಚಂದ್ರ ದೇಸಾಯಿ, ಅಪ್ಪಿ ಇಂಗಪ್ಪಾ ಹಣಬರ, ಬರಾಪ್ಪಾ ಬಾಬು ಹಣಬರ ಎಂದು ಗುರುತಿಸಲಾಗಿದ್ದು, ಇವರೆಲ್ಲರನ್ನೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.