ಅಧ್ಯಾತ್ಮ ದೃಷ್ಟಿಯಿಂದ ಹೇಗೆ ಪ್ರಪಂಚ ಹೇಗೆ ಸೃಷ್ಟಿಯಾಯಿತು ಎಂದು ತೈತ್ತಿರೀಯ ಉಪನಿಷತ್‌ನ ಬ್ರಹ್ಮವಲ್ಲೀಯಲ್ಲಿ ತಿಳಿಸಿದ್ದಾರೆ.ಸ ಪ್ರಾಣಮಸೃಜತ' ಪರಮಾತ್ಮನು ಮೊದಲಿಗೆ ಪ್ರಾಣವನ್ನು ಸೃಷ್ಟಿಸಿದನು. ಇಲ್ಲಿ
ಪ್ರಾಣ’ವು ಕೇವಲ ಉಸಿರಾಟವಲ್ಲ, ಅದು ಜೀವಶಕ್ತಿ, ಎಲ್ಲ ಚಟುವಟಿಕೆಗಳ ಮೂಲ ಶಕ್ತಿ. ಪ್ರಾಣಾಚ್ಛ್ರದ್ಧಾಂ' ಪ್ರಾಣದಿಂದ ಶ್ರದ್ಧೆ , ಆಸ್ಥೆ, ನಂಬಿಕೆ, ಒಲವು, ಹುಟ್ಟಿತು. ಶ್ರದ್ಧೆ ಇಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ.
ಖಂ ವಾಯುಜ್ಯೋತಿರಾಪಃ ಪೃಥಿವೀ’ ಆಕಾಶ, ವಾಯು, ಅಗ್ನಿ, ಜಲ, ಭೂಮಿ ಹೀಗೆ ಪಾಂಚಭೌತಿಕ ತತ್ತ್ವಗಳು ಪ್ರಾಣದಿಂದ ಉತ್ಪನ್ನವಾದವು. .ಅನ್ನಂ' ಶರೀರದ ಪೋಷಣೆಗಾಗಿ ಅನ್ನ. ಇದು ಶಕ್ತಿಯ ಮೂಲ.
ಅನ್ನಾದ್ವೀರ್ಯಂ’ ಅನ್ನದಿಂದ ಶಕ್ತಿಯುಂಟಾಗುತ್ತದೆ. ಇಂದ್ರಿಯಂ ಮನಃ' ಇಂದ್ರಿಯಗಳು, ಸಂವೇದನಾತ್ಮಕ ಅಂಗಗಳು ಮತ್ತು ಮನಸ್ಸು ಇವು ನಮಗೆ ಅನುಭವಗಳ ಜ್ಞಾನವನ್ನು ಕೊಡುತ್ತವೆ.
ತಪಃ’ ಶಕ್ತಿಯಿಂದ ತಪಸ್ಸು, ಆಧ್ಯಾತ್ಮಿಕ ಶಕ್ತಿಯ ಸಾಧನೆ. ಮಂತ್ರಾಃ ಕರ್ಮ' ತಪಸ್ಸಿನಿಂದ ಮಂತ್ರಗಳು, ಧಾರ್ಮಿಕ ಕರ್ಮಗಳು, ಕ್ರಿಯೆಗಳು ಪ್ರಾರಂಭವಾಯಿತು. ಮುಂದೆ ವಿವಿಧ ಲೋಕಗಳು
ಲೋಕಾಃ ಲೋಕೇಷು ಚ ನಾಮ ಚ’ ಸೃಷ್ಟಿಯಾಯಿತು. ನಂತರ ಅವರಲ್ಲಿ ಇರುವ ಪ್ರಾಣಿಗಳ ಹೆಸರುಗಳು ಉತ್ಪತ್ತಿಯಾದವು.
ಹೀಗೆ ಸೃಷ್ಟಿಯಾದ ಪ್ರಪಂಚದಲ್ಲಿ ನಾವುಗಳು ಜೀವಿಸುತ್ತಿದ್ದೇವೆ. ಪರಮಾತ್ಮ ಇಲ್ಲಿ ಸೂತ್ರಧಾರ, ನಾವು ಪಾತ್ರಧಾರಿಗಳು. ಒಂದು ಪ್ರಾಣಿಗೆ ಬೇಕಾದ ಎಲ್ಲವನ್ನು ಸೃಷ್ಟಿಸಿದ ಭಗವಂತನನ್ನು ಆರಾಧಿಸಬೇಕು. ಭಗವಂತನ ಆರಾಧನೆಯೇ ಜೀವಿಯ ಮೂಲ ಧ್ಯೇಯ.
ನಮ್ಮನ್ನು ಪ್ರಪಂಚವನ್ನು, ಚರಾಚರವನ್ನು ಸೃಷ್ಟಿಸಿದ ಭಗವಂತನನ್ನು ಹೇಗೆ ಆರಾಧಿಸಬೇಕು. ಏನನ್ನು ಮಾಡಿದರೆ ಭಗವಂತ ನಮಗೆ ಒಲಿಯುತ್ತಾನೆ ಎಂಬ ಪ್ರಶ್ನೆ ಹಾಕಿಕೊಂಡರೆ ಭಗವದ್ಗೀತೆಯಲ್ಲಿ ಪರಮಾತ್ಮನೇ ತಿಳಿಸಿದಂತೆ ನಾವು ನಿಷ್ಕಾಮ ಭಕ್ತಿಯನ್ನು ಭಗವಂತನಲ್ಲಿ ಮಾಡಬೇಕು. ನಿಷ್ಕಾಮ ಅಂದರೆ ಆಸೆ ರಹಿತವಾದ ಭಕ್ತಿ. ದೇವರಲ್ಲಿ ಭಕ್ತಿ ಮಾಡುವಾಗ ಯಾವುದೇ ಐಹಿಕ ಸುಖಗಳನ್ನು ಪಡೆಯಲು ದೇವರಲ್ಲಿ ಬೇಡಿದರೆ ಅದು ನಿಷ್ಕಾಮ ಭಕ್ತಿಯಾಗುವುದಿಲ್ಲ. ಭಗವಂತನಲ್ಲಿ ಭಕ್ತಿ ಮಾಡುವಾಗ ದೇವರಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದಬೇಕು. ನಮ್ಮ ಅಹಂಕಾರ, ನಿರ್ಧಾರ, ತರ್ಕ, ಹಕ್ಕುಗಳನ್ನೆಲ್ಲಾ ತ್ಯಜಿಸಿ `ನೀನೇ ನನ್ನೆಲ್ಲವೂ’ ಎಂಬ ಭಾವದೊಂದಿಗೆ ಪರಮಾತ್ಮನಿಗೆ ಶರಣಾಗಬೇಕು. ಮನಸ್ಸು ದೇವರ ಆರಾಧನೆಯಲ್ಲಿ ಸಂಪೂರ್ಣ ವಿಲೀನವಾಗಬೇಕು. ನಿಜವಾದ ಭಕ್ತಿ ಎಂದರೆ ಅಹಂಕಾರವಿಲ್ಲದ, ನಿರಂತರ, ನಿಸ್ವಾರ್ಥ ಪ್ರೇಮದಿಂದ, ಪರಮಾತ್ಮನನ್ನು ಸ್ಮರಿಸಿ, ಅವನಲ್ಲಿ ಸಂಪೂರ್ಣ ಶರಣಾಗುವಿಕೆ. ಅದು ಯಾವುದೇ ಧರ್ಮ, ರೂಪ ಅಥವಾ ಹೆಸರು ಇರಲಿ, ಭಾವ ಶುದ್ಧಿಯೇ ನಿಜವಾದ ಭಕ್ತಿಯ ಮೂಲ. ಭಕ್ತಿಯೊಂದೇ ಮುಕ್ತಿಗೆ ಸಾಧನೆ ಎಂದು ಎಲ್ಲಾ ದಾರ್ಶನಿಕರು, ದಾಸರಾಯರು ತಿಳಿಸಿಕೊಟ್ಟಿದ್ದಾರೆ.