ಅವತ್ತು ನಿಮ್ಮಿ ಅಕ್ಕನು ಮಂಡಿಸಿದ ಬಜೆ ಟ್‌ಗೆ ಖಡೇ… ಖಡೇ ರುದ್ರ ಎಂದು ಹಾರಾಡಿದ ಮದ್ರಾಮಣ್ಣೋರು ಈಗ ತಡೀರಿ… ನಿಮ್ಮಿ ಅಕ್ಕನ ಲೆಕ್ಕ ಸರಿಯಿಲ್ಲ… ನಾವು ಕೊಡುತ್ತೇವೆ ಪಕ್ಕಾ ಅನ್ನುತ್ತಿದ್ದಾರೆ. ಇದನ್ನು ಕೇಳಿದ ಹಲವರು ಕೊಟ್ಟರೂ ಕೊಡಬಹುದು ಪಕ್ಕಾ ಲೆಕ್ಕ ಎಂದು ಕಾಯುತ್ತಿದ್ದಾರೆ. ಇದೇ ಚಾನ್ಸು ಅಂದುಕೊಂಡು ಅಣ್ಣಾ ಮದ್ರಾಮಣ್ಣ ಈ ಸಲ ನಂಗೆ ಇಷ್ಟು… ನಿಂಗೆ ಇಷ್ಟು ಅಂತ ಗಂಟು ಬಿದ್ದಿದ್ದಾರೆ. ಎಲ್ಲರೂ ಗಂಟು ಬಿದ್ದರಲ್ಲಪಾ ಏನಾದರೂ ಮಾಡಲೇಬೇಕು…ಯಾರಿಗೂ ನಾನು ಇಲ್ಲ ಅನ್ನುವಂತಿಲ್ಲ… ಕೊಡುವಂತಿಲ್ಲ ಹಾಗಾಗಿ ಮಾಡುತ್ತೇನೆ ಐಡಿಯ ಅಂತ ಕೇಳೋಕೆ ವಂದವರಿಗೆ…. ಕೊಡನ ಬುಡ್ರೋ ಏನೇನು ಬೇಕು… ನಿಮ್ಮ ಇಲಾಖೆಗೆ ಎಷ್ಟು ಬೇಕು ಎಂದು ಕೇಳಿದಕೂಡಲೇ ಅವರು.. ಸಾಹೇಬರೇ ನಮಗೆ ಅದು ಇಲ್ಲ.. ಇದು ಇಲ್ಲ… ಇನ್ನೊಂದಿಲ್ಲ.. ಮತ್ತೊಂದಿಲ್ಲ ಅಂದ ಕೂಡಲೇ ಮದ್ರಾಮಣ್ಣೋರು.. ಅಷ್ಟೇ ತಾನೆ… ಲೆಕ್ಕಕ್ಕ ಹಚ್ಚಿಕೊಳ್ತಾರೆ.. ಅಲ್ಲೇ ಬರಿಸಿ ಹೋಗ್ರಿ ಅಂತ ಹೇಳಿದರಂತೆ…. ಅಲ್ಲ ಸಾಹೇಬ್ರೆ ಲೆಕ್ಕ ಹಚ್ಕೊ ಅಂತೀದಿರಲ್ಲ ಅಂದರೆ ನಾ ಏನ್ ಮಾಡೋಕೆ ಆಗ್ತದೆ… ಅವರು ಕೇಳುತ್ತಾರೆ ನಾ ಇಲ್ಲ ಅನ್ನಲಾರದೇ ಹಚ್ಚಿಕೋ ಅನ್ನುತ್ತೇನೆ…. ಕಳೆದ ಐದಾರು ದಿನಗಳಿಂದ ನಾನು ಅದನ್ನೇ ಮಾಡುತ್ತಿದ್ದೇನೆ.. ನಿಮಗೇನು ಬೇಕು ಅಂತ ಹೇಳಿ..ಅಲ್ಲಿ ಬರಸ್ರಿ ಮನೀಗೆ ಹೋಗ್ರಿ… ಒಂದೇ ಮಾತು ಅಂದರೆ ನಾವು ನಿಮ್ಮಿ ಅಕ್ಕನಿಗಿಂತ ಲೆಕ್ಕದಲ್ಲಿ ಪಕ್ಕ ಎಂದು ಗಹಗಹಿಸಿ ನಕ್ಕು… ತಡೆಯಿರೀ.. ತಡೆಯಿರೀ… ಇನ್ನೂ ಸ್ವಲ್ಪ ದಿನ ತಡಿಯಿರೀ ಎಂದು ಸ್ಲೋಗನ್ ಹಾಕಿದ ಕೂಡಲೇ ಡೆಲ್ಲಿಯಲ್ಲಿ ನಿಮ್ಮಕ್ಕ.. ಬೋಡೋಣ ಮದ್ರಾಮಣ್ಣ-ಕೊಮರಾಮಣ್ಣ ಅಂತ ಅಂತಿದಾರಂತೆ.