ರಾಯಚೂರು: ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಿ.ಕೆ ಹರಿಪ್ರಸಾದ ಅವರು ಭೇಟಿಯಾಗಿದ್ದಾರೆ. ಸಚಿವರನ್ನಾಗಿ ಮಾಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ನಾವು ನಮ್ಮ ಸ್ಥಾನ ಉಳಿಸಿಕೊಂಡರೆ ಸಾಕು. ರಾಜಕೀಯದಲ್ಲಿ ಏನು ಹೇಳೊಕೆ ಆಗುವುದಿಲ್ಲ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಹೇಳಿಕೆ ನೀಡುವ ಅಧಿಕಾರ ನಮಗಿಲ್ಲ. ಪಕ್ಷದ ವರಿಷ್ಠರನ್ನೇ ಕೇಳಿದರೆ, ತಿಳಿಯುತ್ತದೆ ಎಂದು ಹೇಳಿದರು. ಮಾಜಿ ಸಚಿವ ಎಚ್.ವಿಶ್ವನಾಥ ಅವರು ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರೇನು ನಮ್ಮ ಪಕ್ಷವರಲ್ಲ. ಹೇಳಲು ಅವರು ಯಾರು ಎಂದು ಪ್ರಶ್ನಿಸಿದರು.
ವಿವಿಧ ಸಮುದಾಯಗಳು ಜಾರು ಸಮೀಕ್ಷೆ ಕುರಿತು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಮರು ಸಮೀಕ್ಷೆ ಮಾಡಿದರೆ ಏನು ತಪ್ಪು ಎಂದು ಮರು ಪ್ರಶ್ನೆ ಹಾಕಿದರು. ರಾಜಕೀಯ ನಿಂತ ನೀರಲ್ಲ. ಹರಿಯುತ್ತಲೇ ಇರುತ್ತದೆ. ಸರ್ಕಾರದಲ್ಲಿ ಏರಿಳಿತ ನಡೆಯುತ್ತವೆ. ನಮ್ಮ ಸರ್ಕಾರ ಇದ್ದಾಗ ನಡೆಯುತ್ತವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂವರು ಸಿಎಂಗಳಾಗಿದ್ದರು. ಅನೇಕ ಮಂತ್ರಿ ಮಂಡಲ ಬದಲಾವಣೆಯಾಗಿಲ್ಲ. ನಮ್ಮ ಸರ್ಕಾರ ಎರಡು ವರ್ಷದಲ್ಲಿ ಏನು ಆಗಿಲ್ಲ. ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.
ಯಾವೂದು ಶಾಶ್ವತವಲ್ಲ.ಮಂತ್ರಿ ಮಂಡಲ ಬದಲಾವಣೆ ಆಗಬಹುದು..ರಾಜಕೀಯ ಇದು. ಐದು ಬಾರಿ ಗೆದ್ದವರು ಸಚಿವರಾಗಬೇಕು ಎಂಬ ಬೇಡಿಕೆಯೂ ಇದೆ. ಐದು ವರ್ಷ ಸಿದ್ಧರಾಮಯ್ಯನವರು ಸಿಎಂ ಆಗಿ ಇರುತ್ತಾರೆ. ಅವರನ್ನು ಬದಲಾವಣೆಯ ಸನ್ನಿವೇಶ ಎಲ್ಲಿದೆ
ಎಂದು ಪ್ರಶ್ನಿಸಿದರು.