ನಾಳೆಯಿಂದ ಪೋಟೋ ಟುಡೇ ವಸ್ತು ಪ್ರದರ್ಶನ

ಬೆಂಗಳೂರು: ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇನ್ ಟ್ರಾಕ್ಟನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಸಹಯೋಗದಲ್ಲಿ ಜೂ. 27ರಿಂದ 29ರವರಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪೋಟೋ ಟುಡೇ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಿಡಿಯೊ ಮತ್ತು ಪೋಟೋ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಕೃಷ್ಣಪ್ಪ, ಕರ್ನಾಟಕಪೋಟ್ ಆಂಡ್ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷ ಬೆಂಜಮಿನ್, ಕಾರ್ಯದರ್ಶಿ ಜಗದೀಶ್, ಕರ್ನಾಟಕ ಪತ್ರಿಕಾ ಛಾಯಗ್ರಾಹಕರ ಸಂಘದ ಅಧ್ಯಕ್ಷ ವಿಶ್ವೇಶ್ವರಪ್ಪ ಭಾಗವಹಿಸಿದ್ದರು.
ಕೃಷ್ಣಪ್ಪ ಮಾತನಾಡಿ, 25ವರ್ಷ ಸಂಭ್ರಮಾಚರಣೆ ಅಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಡಿಯೋ ಕ್ಯಾಮರ ಮತ್ತು ಕ್ಯಾಮರಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ಕ್ಯಾಮರಗಳ ಮಹತ್ವ ಮತ್ತು ಅದನ್ನು ಬಳಕೆ ಮಾಡುವ ಕುರಿತು ಕ್ಯಾಮರ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಗುವುದು. 250ಕ್ಕೂ ಮಳಿಗೆಗಳನ್ನು ತೆರೆಯಲಾಗುತ್ತದೆ. ಸಾರ್ವಜನಿಕರು ಮತ್ತು ವಿಡಿಯೋ ಮತ್ತು ಕ್ಯಾಮರ ಬಳಕೆದಾರರು ಮತ್ತು ವಿಡಿಯೊ, ಕ್ಯಾಮರದಲ್ಲಿ ಉದ್ಯಮದಲ್ಲಿ ಇರುವ ಮತ್ತು ವಿಡಿಯೊಗ್ರಾಫರ್, ಪೋಟೋಗ್ರಾಫರ್ ಗಳು ಇದರ ಅವಕಾಶ ಪಡೆಯಬಹುದು ಎಂದು ಹೇಳಿದರು.
ಕ್ಯಾಮರದಲ್ಲಿ ದಿನದಿಂದ ಹೊಸ ತಂತ್ರಜ್ಞಾನ ಬರುತ್ತಿದೆ ಹಾಗೂ ಕ್ಯಾಮರದಲ್ಲಿ ಅದ್ಬುತ ಬದಲಾವಣೆಯಾಗುತ್ತಿದೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ , ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯಪ್ರಸಾದ್ ಉದ್ಘಾಟನೆ ಮಾಡುತ್ತಿದ್ದು, ಪತ್ರಿಕಾ ಛಾಯಗ್ರಾಹಕರು, ಛಾಯಗ್ರಾಹಕರು ಮತ್ತು ಮಹಿಳಾ ಛಾಯಗ್ರಾಹಕರು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.