ರಾಯಚೂರು: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುವ ಸಾಧ್ಯತೆಳಿವೆ. ಈ ಹಿನ್ನೆಲೆ ಕೃಷ್ಣಾನದಿಗೂ ಹೊರಹರಿವು 84,445 ಕ್ಯೂಸೆಕ್ ಇರುತ್ತದೆ. ಅಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಪರಿಗಣಿಸಲಾಗಿ ನಾರಾಯಣಪುರ ಅಣೆಕಟ್ಟೆಗೆ ಸುಮಾರು 1,10, ಲಕ್ಷ ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆಗಳಿವೆ. ಮದ್ಯಾಹ್ನ. 3 ಗಂಟೆ ನಂತರ , ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್‌ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು, ಒಳಹರಿವಿನ ಅನುಸಾರ ನದಿಗೆ ಬಿಡುತ್ತಿರುವ ಹೊರಹರಿವನ್ನು ಕ್ರಮೇಣ ಹೆಚ್ಚಿಸಲಾಗುವುದು, ಕಡಿಮೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ನಾರಾಯಣಪುರ ಅಣೆಕಟ್ಟಿನ ಕೆಳಭಾಗದಲ್ಲಿರುವ ನದಿ ಪಾತ್ರದ ಜನ ಜಾನುವಾರು ಜಾಗ್ರತೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.