ನಗರಸಭೆ ಮಹಿಳಾ ಸಿಬ್ಬಂದಿ ಕೊಲೆ

ಬಸವಕಲ್ಯಾಣ: ನಗರಸಭೆ ಮಹಿಳಾ ಸಿಬ್ಬಂದಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ಭಾನುವಾರ ರಾತ್ರಿ ಜರುಗಿದೆ.
ನಗರದ ಶಾಹುಸೇನ್‌ಗಲ್ಲಿ ನಿವಾಸಿ ರೇಷ್ಮಾ ಶೇಕ್ ಹೈದರ್(೩೪) ಕೊಲೆಯಾದ ಮಹಿಳೆ. ಮನೆಯಲ್ಲಿಯ ತನ್ನ ಕೋಣೆಯಲ್ಲಿ ಮಲಗಿದ ವೇಳೆ ಅಪರಿಚಿತ ವ್ಯಕ್ತಿ ಕೊಲೆ ಮಾಡಿರಬಹುದು ಎಂದು ತಿಳಿದು ಬಂದಿದೆ. ಮೃತ ಮಹಿಳೆ ಕುತ್ತಿಗೆ ಹಾಗೂ ಬಾಯಿ ಸೇರಿದಂತೆ ದೇಹದ ಕೆಲ ಭಾಗಗಳಲ್ಲಿ ತೀವ್ರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಅಲಿಸಾಬ್, ಕ್ರೈಂ ಪಿಎಸ್‌ಐ ಸುರೇಶ ಹಜ್ಜರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ್ ಸೇರಿದಂತೆ ಅಧಿಕಾರಿಗಳ ತಂಡ ಕೊಲೆಯಾದ ಮಹಿಳೆ ನಿವಾಸಕ್ಕೆ ಭೇಟಿನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.