ಧರೆಗುರುಳಿದ ಮರ: ಟ್ರಾಫಿಕ್ ಜಾಮ್

ಧಾರವಾಡ: ಕಳೆದ ರಾತ್ರಿ ಅಲ್ಪ‌ ಪ್ರಮಾಣದಲ್ಲಿ ಸುರಿದ ಮಳೆಯಿಂದ‌ ಇಲ್ಲಿಯ ಕೋರ್ಟ್ ವೃತ್ತದಲ್ಲಿ ಬೃಹದಾಕಾರದ ಮರವೊಂದು ಧರೆಗುರುಳಿದೆ.
ತಡರಾತ್ರಿ ಮಳೆ ಸುರಿದಿದ್ದರಂದ ಒಣಗಿದ ಮರ ಉರುಳಿ ಆಟೋ ರಿಕ್ಷಾ ಮೇಲೆ ಬಿದ್ದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ‌ ಸಂಭವಿಸಿಲ್ಲ. ಆದರೆ‌ ಬಿಆರ್‌ಟಿಎಸ್ ರಸ್ತೆ ಬದಿಗಿನ ಸಾಮಾನ್ಯ ರಸ್ತೆಯಲ್ಲಿ ಮರ ಉರುಳಿದ್ದರಿಂದ ಎಲ್ಲ ವಾಹನಗಳನ್ನು ಬಿಆರ್‌ಟಿಎಸ್ ಪಥದಲ್ಲಿಯೇ ಬಿಡಲಾಗುತ್ತಿದೆ. ಇದರಿಂದ ಹುಬ್ಬಳ್ಳಿಯಿಂದ ಧಾರವಾಡ ಮತ್ತು ಬೆಳಗಾವಿಗೆ ತೆರಳುವವರಿಗೆ ತೊಂದರೆ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿರುವ ಸಂಚಾರಿ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಪರದಾಡುತ್ತಿದ್ದಾರೆ.