ದಕ್ಷಿಣ ಆಫ್ರಿಕಾ ತಂಡ ಆಸ್ಟೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಾಯಕ ಟೆಂಬಾ ಬವುಮಾ ಮತ್ತು ಶತಕವೀರ ಐಡನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾವನ್ನು ಅದ್ಭುತ ಗೆಲುವಿನತ್ತ ಕೊಂಡೊಯ್ದರು. ಅನುಕೂಲಕರ ಬ್ಯಾಟಿಂಗ್ ಪರಿಸ್ಥಿತಿಯನ್ನು ಬಳಸಿಕೊಂಡು, ಬವುಮಾ ಮತ್ತು ಆರಂಭಿಕ ಆಟಗಾರ ಮಾರ್ಕ್ರಾಮ್, ಆಸ್ಟ್ರೇಲಿಯಾದ ಅತ್ಯಂತ ಪ್ರಬಲ ಬೌಲಿಂಗ್ ದಾಳಿಯ ವಿರುದ್ಧ 147 ರನ್‌ಗಳ ಜತೆಯಾಟ ನಡೆಸಿದರು.
282 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 213/2 ಸ್ಕೋರ್ ಮಾಡಿತು, ಇಂದು 5 ವಿಕೆಟ್‌ಗಳ ಗೆಲುವಿನೊಂದಿಗೆ 27 ವರ್ಷಗಳಲ್ಲಿ ತಮ್ಮ ಮೊದಲ ಐಸಿಸಿ ಟ್ರೋಫಿಯನ್ನು ಗೆಲ್ಲುವ ಕನಸನ್ನು ನನಸಾಗಿಸಿತು.