ತುಮಕೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಗರಕ್ಕೆ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ಅನುಭವವನ್ನು ತರಲು ಸಜ್ಜಾಗಿದೆ.
ತುಮಕೂರು ಹಾಗೂ ಆಸುಪಾಸಿನ ಜಿಲ್ಲೆಗಳ ಕ್ರಿಕೆಟ್ ಪ್ರಿಯರಿಗೆ ಇದೊಂದು ಸಂತಸದ ಸುದ್ದಿ. ಐಪಿಎಲ್ ಫ್ಯಾನ್ ಪಾರ್ಕ್ ಏಪ್ರಿಲ್ 26 ಹಾಗೂ 27 ತುಮಕೂರಿನಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಪಂದ್ಯದ ನೇರ ಪ್ರಸಾರ ಮತ್ತು ಭವ್ಯ ಐಪಿಎಲ್ ಹಬ್ಬವನ್ನು, ಕ್ರೀಡಾಂಗಣದಂತಹ ವಾತಾವರಣದಲ್ಲಿ ಆನಂದಿಸುವ ಅವಕಾಶವಿದೆ.
ಫ್ಯಾನ್ ಪಾರ್ಕ್ ವಿಶೇಷತೆಗಳು: ಫ್ಯಾನ್ ಪಾರ್ಕ್ ದೈತ್ಯ ಪರದೆಗಳು, ಸಂಗೀತ, ಫುಡ್ ಕೋರ್ಟ್‌ಗಳು, ಮಕ್ಕಳ ಆಟದ ಪ್ರದೇಶ, ಫೇಸ್-ಪೇಂಟಿಂಗ್ ಸ್ಟೇಷನ್‌ಗಳು, ವರ್ಚುವಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ವಲಯಗಳು, ಚಿಯರ್-ಒ-ಮೀಟರ್‌ಗಳು, 360-ಡಿಗ್ರಿ ಫೋಟೋ ಬೂತ್‌ಗಳು ಮತ್ತು ಪ್ರತಿಕೃತಿ ಡಗೌಟ್‌ಗಳಲ್ಲಿ ನೇರ ಪಂದ್ಯ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಕ್ರೀಡಾಂಗಣಗಳಲ್ಲಿ ಪಂದ್ಯಗಳಿಗೆ ಹಾಜರಾಗಲು ಸಾಧ್ಯವಾಗದ ಅಭಿಮಾನಿಗಳಿಗೆ ಐಪಿಎಲ್ ಉತ್ಸಾಹವನ್ನು ಮರುಸೃಷ್ಟಿಸುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಐಪಿಎಲ್ ಫ್ಯಾನ್ ಪಾರ್ಕ್‌ಗೆ ಪ್ರವೇಶ ಸಂಪೂರ್ಣವಾಗಿ ಉಚಿತವಾಗಿರುತ್ತದೆ, ಎಲ್ಲಾ ಕ್ರಿಕೆಟ್ ಪ್ರಿಯರು ಆಚರಣೆಯಲ್ಲಿ ಭಾಗವಹಿಸಲು ಮತ್ತು ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ಇದು ಪ್ರವೇಶವನ್ನು ನೀಡುತ್ತದೆ.
ಕರ್ನಾಟಕದಲ್ಲಿ ಮುಂದಿನ ಐಪಿಎಲ್ ಫ್ಯಾನ್ ಪಾರ್ಕ್: ಏಪ್ರಿಲ್ 26 ಹಾಗೂ 27 ತುಮಕೂರಿನಲ್ಲಿ ನಡೆಯಲಿದ್ದು, ಮೇ 3 ಹಾಗೂ 4 ರಂದು ಬೆಳಗಾವಿಯಲ್ಲಿ ನಡೆಯಲಿದೆ, ಮೇ 17 ಹಾಗೂ 18 ರಂದು ಮಂಗಳೂರಿನಲ್ಲಿ ನಡೆಯಲಿವೆ.