ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆಯ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಬಹಳ ವಿಶೇಷವಾಗಿ ಆಚರಿಸಿಲು ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (ಪಿಎಸ್ಬಿ) ಸಂಸ್ಥೆಯು ಬೆಂಗಳೂರು, ಎನ್ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ ಭಾರತದ 18 ನಗರಗಳಲ್ಲಿ 75 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಘೋಷಿಸಿದ್ದಾರೆ ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ” ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಈ ಶಾಲೆಯು ವರ್ಷದ ಅಂತ್ಯದ ವೇಳೆಗೆ 100 ಕೇಂದ್ರಗಳಿಗೆ ಮತ್ತು ಮುಂದಿನ ಮೂರು ವರ್ಷಗಳ ಅಂತ್ಯದ ವೇಳೆಗೆ 250 ಕೇಂದ್ರಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.