ಡೆಂಘಿ ಪರೀಕ್ಷೆಗೆ ಏಕರೂಪದ ದರ ಕಡ್ಡಾಯ

ಬೆಂಗಳೂರು: ಡೆಂಘಿ ಪರೀಕ್ಷೆಗೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಏಕರೂಪದ ದರ ಕಡ್ಡಾಯಗೊಳಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೆಂಘಿ ಪರೀಕ್ಷೆ ಸಾರ್ವಜನಿಕರಿಗೆ ಹೊರಯಾಗಬಾರದು ಎಂಬ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳು, ಪ್ರಯೋಗಶಾಲೆಗಳು ಹಾಗೂ ಡಯೋಗ್ನೋಸ್ಟಿಕ್‌ ಲ್ಯಾಬೊರೇಟರಿಗಳು ಸೇರಿದಂತೆ ರಾಜ್ಯಾದ್ಯಂತ ಏಕರೂಪದ ದರ ಕಡ್ಡಾಯಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಡೆಂಘಿ ರೋಗವನ್ನು ಎಲ್ಲರೂ ಜೊತೆಯಾಗಿ ಹಿಮ್ಮೆಟ್ಟಿಸೋಣ ಎಂದಿದ್ದಾರೆ.