ಜೋಳ ಖರೀದಿ ಆರಂಭಿಸಲು ಒತ್ತಾಯಿಸಿ ಸಿಂಧನೂರು ಬಂದ್: ಅಭೂತಪೂರ್ವ ಬೆಂಬಲ

ಸಿಂಧನೂರು: ಜೋಳಖರೀದಿ ಆರಂಭಿಸಲು ಒತ್ತಾಯಿಸಿ ರೈತಪರ, ಪ್ರಗತಿಪರ ಸಂಘಟನೆಗಳಿಂದ ಕರೆ ನೀಡಿದ ಸೋಮವಾರ ಸಿಂಧನೂರು ಬಂದ್‌ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರಕಿತು.
ಸಿಂಧನೂರು ಬಂದ್ ಅಂಗವಾಗಿ ವಿವಿಧ ರಸ್ತೆಗಳಲ್ಲಿ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ನೀಡಿದರು. ರಸ್ತೆಗಳಿದ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರು ತಾಲೂಕು ಬಂದ್ ಹೋರಾಟಕ್ಕೆ ಸಿಪಿಐಎಂ ಲಿಬರೇಶನ್ ಸೇರಿ ವಿವಿಧ ಪಕ್ಷಗಳು, ಜಮಾತೆ ಇಸ್ಲಾಂ, ರೈತಪರ, ಕನ್ನಡಪರ, ವರ್ತಕರ, ಗುತ್ತಿಗೆದಾರರ ಸಂಘ, ತಾಲೂಕ ವಕೀಲರ ಸಂಘ, ಗಂಜ್ ವರ್ತಕರು, ಗೊಬ್ಬರ ಅಂಗಡಿಗಳ ಮಾಲಿಕರು, ಗುತ್ತೆದಾರರ ಸಂಘ, ಪ್ರಗತಿ ಪರ ಸಂಘಟನೆಗಳು ಬೆಂಬಲ ನೀಡಿದವು.
ಪ್ರತಿಭಟನಾ ನಿರತ ಹೋರಾಟಗಾರರು ಮಾತನಾಡಿ, ರೈತರು ಅನೇಕ ದಿನಗಳಿಂದ ಜೋಳ‌ ಖರೀದಿ ಆರಂಭಿಸಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ನಮ್ಮ ಹೋರಾಟ ತೀವ್ರ ವಾಗುತ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಬೆಂಕಿ ಹತ್ತಿದಾಗ ಬಾವಿ ತೋಡಲು ಹೊರಟಿದ್ದಾರೆ ಇದು ಅನುಪಯುಕ್ತ ಈ ಮುಂಚೆಯೇ ನಿರ್ಧಾರ ಮಾಡಬೇಕಾಗಿತ್ತು ಇದು ರೈತರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ನಿನ್ನೆ ರೈತರ ಅರೆ ಬೆತ್ತಲೆ ರಸ್ತೆ ತಡೆ ರಸ್ತೆಯಲ್ಲಿ ಕುಳಿತ ಊಟ ಮಾಡಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಳೆದ ವಾರ ಇದೇ ರೀತಿ ತಹಶೀಲ್ದಾರ್ ಕಚೇರಿ ಮುಖ್ಯದ್ವಾರದಲ್ಲಿ ಲಾರಿ ನಿಲ್ಲಿಸಿ ಪ್ರತಿಭಟನೆ ನಡೆಸಿದ ಸಮಯದಲ್ಲಿ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಹಾಗೂ ಪ್ರಭಾರ ತಹಶೀಲ್ದಾರ್ ಶೃತಿ ಅವರು ಬೇಡಿಕೆ ಈಡೇರಿಕೆಗೆ ನಾಲ್ಕು ದಿನ ಸಮಯ ಕೇಳಿದ್ದರು. ನಂತರ ರೈತರು ಪ್ರತಿಭಟನೆ ವಾಪಸ್ ಪಡೆದಿದ್ದರು. ಸರ್ಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಕಾರಣ ರೈತರು ಆಕ್ರೋಶಗೊಂಡು ರಸ್ತೆಗೆ ಇಳಿದು ಪ್ರತಿಭಟನೆ ತೀವ್ರಗೊಳಿಸಿದರು.
ಕಳೆದ ಡಿಸೆಂಬರ್ ನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಗೆ ಬೆಂಬಲ ಬೆಲೆಯ ಹಣ ಬಿಡುಗಡೆ ಮಾಡಿಲ್ಲ ಹೊಸದಾಗಿ ಜನವರಿಯಲ್ಲಿ ಜೋಳ ಖರೀದಿ ಮಾಡಬೇಕಾಗಿತ್ತು. ಆದರೆ ಸರ್ಕಾರ ಫೆಬ್ರವರಿಯಲ್ಲಿ ನೋಂದಣಿ ಮೇನಲ್ಲಿ ಖರೀದಿ ಆರಂಭಿಸಿದೆ. ಇದು ಅಧಿಕಾರಿಗಳ ಲೋಪವೇ ಹೊರತು ರೈತರು ತಪ್ಪಲ್ಲ ಎಂದು ದೂರಿದರು.45 ದಿನಗಳಾದರೆ ನುಸಿ, 60 ದಿನಗಳಾದರೆ ಹುಳ ಬರುತ್ತದೆ ಎಂಬುದು ಸಾಮಾನ್ಯ ಜನರಿಗೂ ಗೊತ್ತು.ಇದರ ಬಗ್ಗೆ ಅಧಿಕಾರಿಗಳಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶಿಸಿದರು.ತಡವಾಗಿ ಆರಂಭಿಸಿ ತಾವೇ ತಪ್ಪು ಮಾಡಿ ರೈತರಿಗೆ ಶಿಕ್ಷೆ ಕೊಡುತ್ತಿರುವುದು ರೈತ ದ್ರೋಹಿ ಧೋರಣೆಯಾಗಿದೆ ಎಂದು ಆರೋಪಿಸಿದರು.