ಜೆಡಿಎಸ್ ಕಾರ್ಯಕ್ರಮದಲ್ಲಿ ಕಳ್ಳನ ಕೈ ಚಳಕ, ಕಾರ್ಯಕರ್ತರಿಂದ ಗೂಸಾ

ಸಿಂಧನೂರು: ನಗರದ ಯಲಮಂಚಿಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಗುರುವಾರ ಮಧ್ಯಾಹ್ನ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮವನ್ನು ಬಂಡವಾಳಗಿಸಿಕೊಂಡು ಕಳ್ಳ ಜನರ ಜೇಬಿಗೆ ಕೈಹಾಕಿ ಕೈಚಳಕ ತೋರಿಸಿರುವ ಘಟನೆ ನಡೆದಿದೆ.
ಪಿಕೆಟ್ ಪಾಕೆಟ್‌ನಿಂದ ಕಂಗಲಾದ ಜನತೆ ಕಾರ್ಯಕ್ರಮ ನಡೆದ ವೇದಿಕೆ ಮುಂಭಾಗಕ್ಕೆ ಬಂದು ಹಣ ಕಳೆದುಕೊಂಡಿರುವ ಬಗ್ಗೆ ತಮ್ಮ ಅಳಲನ್ನು ಕಾರ್ಯಕ್ರಮ ನಿರೂಪಕನ ಗಮನಕ್ಕೆ ತಂದಾಗ ಕಾರ್ಯಕರ್ತರು ಹಣ ಕಳೆದುಕೊಂಡಿದ್ದ ಸಿಕ್ಕವರು ಹಣ ಮರಳಿ ನೀಡಬೇಕು ಎಂದು ನಿರೂಪಕರು ಮನವಿ ಮಾಡಿದರು.
ಎಚ್ಚೆತ್ತ ಪೊಲೀಸ್ ಇಲಾಖೆ ಕಳ್ಳನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಊಟದ ಹಾಲ್‌ನಲ್ಲಿ ಕಳ್ಳ ಮುಖಂಡರ ಒಬ್ಬರ ಕತ್ತಿನಲ್ಲಿದ್ದ ಬಂಗಾರದ ಚೈನ್‌ಗೆ ಕೈ ಹಾಕುತ್ತಿದ್ದ
ಸಂದರ್ಭದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಾಗ ಸೇರಿದ ಜನ ಕಳ್ಳನನ್ನು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.