ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ಕಪ್ಪು ಸೋಮವಾರ

ಮುಂಬೈ: ಟ್ರಂಪ್ ಅವರ ಸುಂಕಗಳಿಂದಾಗಿ 1987 ರ ಮಾರುಕಟ್ಟೆ ಕುಸಿತವನ್ನು ನೆನಪಿಸುವ ಸಂಭಾವ್ಯ ಮಾರುಕಟ್ಟೆ ಕುಸಿತ ಕಂಡಿದೆ, ಜಗತ್ತಿನಾದ್ಯಂತ ಷೇರುಪೇಟೆ ತಲ್ಲಣಗೊಂಡಿದ್ದು, ಸೋಮವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 3,000ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದ್ದು ಹೂಡಿಕೆದಾರರು ಭಾರೀ ನಷ್ಟ ಅನುಭವಿಸುವಂತಾಗಿದೆ.
ಬೆಳಗ್ಗೆ 11 ಗಂಟೆಯೊಳಗೆ ಶೇ. 3.77ರಷ್ಟು ಕುಸಿತವಾಗಿದೆ. ಬಿಎಸ್​​ಇ ಮತ್ತು ಎನ್​​ಎಸ್​​ಇನ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಕೆಂಪು ಬಣ್ಣದಲ್ಲಿವೆ. ಭಾರತ ಮಾತ್ರವಲ್ಲ, ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿವೆ. ಇದು ಬ್ಲ್ಯಾಕ್ ಮಂಡೇ ಎಂದು ಹೂಡಿಕೆದಾರರು ಕನವರಿಸುವಂತಾಗಿದೆ. ಪ್ರಪಂಚದಾದ್ಯಂತ ಮಾರುಕಟ್ಟೆಗಳು ಕುಸಿದಿದ್ದು, ಪರಿಸ್ಥಿತಿಯನ್ನು ಸರಿಪಡಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು, ಸೋಮವಾರದ ವೇಳೆಗೆ ಅಪಘಾತ ಸಂಭವಿಸಬಹುದು ಎಂದು ಎಚ್ಚರಿಸಿದ್ದರು, ಜಾಗತಿಕವಾಗಿ ಎಲ್ಲಾ ದೇಶಗಳ ಷೇರುಪೇಟೆಗಳು ಸೋಮವಾರ ಭಾರೀ ಕುಸಿತ ಕಂಡಿವೆ.