ಚುನಾವಣಾ ರಾಜಕೀಯಕ್ಕೆ ರಾಜಣ್ಣ ನಿವೃತ್ತಿ: ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ

ಮೈಸೂರು: ನನಗೆ ಈಗಾಗಲೇ 75 ವರ್ಷ ಆಗಿದೆ ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಂದಿನ ಚುನಾವಣೆ ಬರುವ ಹೊತ್ತಿಗೆ ನನಗೆ 78 ವರ್ಷ ಆಗತ್ತೆ, ಚುನಾವಣೆಗೆ ನಿಂತು ಗೆದ್ದರು ಆರೋಗ್ಯ ದೃಷ್ಟಿಯಿಂದ ಜನರ ಸೇವೆ ಮಾಡಲಿಕ್ಕೆ ಆಗಲ್ಲ ಆದ್ದರಿಂದ ಯಂಗ್ ಸ್ಟಾರ್‌ಗೆ ಅವಕಾಶ ನೀಡಬೇಕು ಅನ್ನೋದು ನನ್ನ ಅಭಿಪ್ರಾಯ, ಚುನಾವಣೆ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳುತ್ತೇನೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದರು.

ಇಂದು ಕಾಂಗ್ರೆಸ್ ಸಾಧನೆ ಸಮಾವೇಶ ಹಿನ್ನಲೆ ಯಾವ ಸಾಧನೆ ಮಾಡಿ ಸಮಾವೇಶ ಮಾಡ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ರಾಜಣ್ಣ ಪ್ರತಿಕ್ರಿಯಿಸಿ ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕೆ ಮಾಡಬೇಕು ಹಾಗಾಗಿ ಟೀಕೆ ಮಾಡುತ್ತಾರೆ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಕೆಲ ಸಚಿವರಿಗೆ ಕೊಕ್ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ‌ ಸಚಿವರ ಬದಲಾವಣೆ ತೀರ್ಮಾನ ತನ್ವೀರ್ ಸೇಠ್ ಮಾಡುತ್ತಾರಾ ? ಶಾಸಕರು ಅವರ ಅಭಿಪ್ರಾಯ ಹೇಳಿದ್ದಾರೆ. ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡತ್ತದೆ ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಏನೇ ಬದಲಾವಣೆ ಇದ್ದರು ಕೂಡ ಎಲ್ಲವೂ ಯಾವ ಸಮಯಕ್ಕೆ ಅನ್ನೋದು ಹೈ ಕಮಾಂಡ್ ತೀರ್ಮಾನ ಮಾಡತ್ತದೆ ಹೈ ಕಮಾಂಡ್ ತೀರ್ಮಾನಕ್ಕೆ ನಾವು ಬದ್ದ ರಾಜಕಾರಣ ನಿಂತ ನೀರಲ್ಲ ಎಂದರು.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣದ ಬಗ್ಗೆ‌ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ ಡಿ ಕೆ ಶಿವಕುಮಾರ್ ಆ ರೀತಿ ಹೇಳಿರುವ ಬಗ್ಗೆ ಅನುಮಾನ ಇದೆ. ನನಗೆ ಆ ರೀತಿ ಅವರು ಹೇಳಿದ್ದಾರೆ ಅನಿಸುವುದಿಲ್ಲ. ನಮ್ಮ ಸರ್ಕಾರ ಹೇಳಿದಂತೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ನೀಡುತ್ತೀದೆ, ಕೆಲ ತಾಂತ್ರಿಕ ಕಾರಣಗಳಿಂದ ಕೆಲ ತಿಂಗಳ ಹಣ ಬಂದಿಲ್ಲ, ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ನೀಡಲು ನಾವು ಬದ್ದ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಮಾತನಾಡಿ ಇದು ನಮ್ಮ ಸ್ವಯಂಕೃತ ಅಪರಾಧದ ಪ್ರತಿಫಲ. ಕೆರೆ ಕಾಲುವೆ ಚರಂಡಿ ಒತ್ತುವರಿಯಿಂದ ಈ ಪರಿಸ್ಥಿತಿ ಬಂದಿದೆ. ನೀರು ಹೇಗೆ ಹರಿಯಬೇಕು ಅಂತಾ ನಾವು ಹೇಳಲು ಸಾಧ್ಯವಿಲ್ಲ. ಅದಕ್ಕೆ ಅದರ ದಾರಿ ಗೊತ್ತಿದೆ. ಮೋರಿ ಚರಂಡಿ ಕಾಲುವೆ ಮುಚ್ಚಿದ ಪರಿಣಾಮ ಈ ರೀತಿ ಅಗಿದೆ. ಸಾಧನಾ ಸಮಾವೇಶ ಮುಗಿದ ನಂತರ ಎಲ್ಲರಿಂದ ಪರಿಶೀಲನೆ ಮಾಡಲಾಗುವುದು, ಈ ಬಗ್ಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು, ರಾಜಕಾಲುವೆ ಒತ್ತುವರಿ ತೆರುವು ಕಾರ್ಯಾಚರಣೆ ನಿರಂತರವಾಗಿ ಮಾಡಲಾಗುವುದು, ಹಿಂದಿನ ಸರ್ಕಾರ ಅರ್ಧಂಬರ್ದ ಮಾಡಿದೆ, ನಾವು ಮಳೆ ಬಂದಾಗ ಮಾತ್ರವಲ್ಲ ಎಲ್ಲಾ ಸಮಯದಲ್ಲೂ ಒತ್ತುವರಿ ತೆರವು ಮಾಡಬೇಕು ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು