ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ರಾಜ್ಯಾಥ್ಯಿತ್ಯ ನೀಡಲಾಗುತ್ತಿದೆ ಎಂದು ಜೈಲ್ ನಿಂದ ಬಿಡುಗಡೆಯಾಗಿರುವ ವಿಚಾರಣಧೀನ ಖೈದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಆರೋಪಗಳಿಗೆ ಜಾಮೀನು ಸಿಗುತ್ತಿದ್ದಂತೆ ರೋಡ್ ಶೋ ನಡೆಸಿದ್ದರು. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಾನಗಲ್ ಪೊಲೀಸರು 7 ಆರೋಪಿಗಳಿಗೆ ಬಂಧನ ಮಾಡಲಾಗಿದೆ. ಅದರೆ ಈಗ ಹಾವೇರಿ ಸಬ್ ಜೈಲಿನಲ್ಲೂ ಸಹ ಗ್ಯಾಂಗ್ ರೇಪ್ ಆರೋಪಿಗಳದೇ ದರ್ಬಾರ್ ನಡೆಸಿದ್ದಾರೆ ಎನ್ನಲಾಗಿದೆ.
ಗ್ಯಾಂಗ್ ರೇಪ್ ಆರೋಪಿಗಳು ಹಾವೇರಿ ಸಬ್ ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ಆಡ್ಡಿದೆ ಆಟ ಅನ್ನೋ ಹಾಗೆ ಆಗಿದೆ. ಇತ್ತೀಚೆಗೆ ಜೈಲಿನಿಂದ ಹೊರಬಂದ ಬಸವರಾಜ್ ಎಂಬ ಆರೋಪಿ ಹೇಳಿಕೆ ನೀಡಿದ್ದು, ಗ್ಯಾಂಗ್ ರೇಪ್ ನ 7 ಜನ ಆರೋಪಿಗಳಿಗೆ ಜೈಲು ಅನ್ನೋದು ಸ್ವರ್ಗ ದ್ದಂತಿದೆ. ಜೈಲಿನೊಳಗೆ ಯಾರೋ ಬಂದ್ರೂ ಯಾವ ಕೇಸ್ ಅಂತ ಅವರಿಗೆ ತಿಳಿಸಬೇಕು, ಇಲ್ಲದಿದ್ದರೆ ಹಲ್ಲೆ ಮಾಡುತ್ತಾರೆ. ಇತ್ತೀಚಿಗೆ ಬೋಗಾವಿ ಗ್ರಾಮದ ದಲಿತ ಯುವಕ ಸುದೀಪ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ.
ಜೈಲಿನಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಹೇಳಿದ ಕೆಲಸವನ್ನ ಉಳಿದವರು ಮಾಡಬೇಕಿದೆ.. ಹೊರಗಡೆ ರೋಡ್ ಶೋ ನಡೆಸಿದ್ದಕ್ಕಿಂತ 10 ಪಟ್ಟು ಒಳಗಡೆ ದೌರ್ಜನ್ಯ ಮಾಡುತ್ತಿದ್ದಾರೆ. ಗ್ಯಾಂಗ್ ರೇಪ್ ಆರೋಪಿಗಳಿಗೆ ದಿನಾ ಗುಟ್ಕಾ ಸೇರಿದಂತೆ ಬಿರಿಯಾನಿ ಸಪ್ಲೈ ಆಗುತ್ತೆ. ಜೈಲು ಸಿಬ್ಬಂದಿಗಳಿಗೆ ಏಕವಚನದಲ್ಲೇ ಬೈತಾರೆ, ಆದರೆ ಸಿಬ್ಬಂದಿಗಳು ಏನ್ ಮಾಡಲ್ಲ.
ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳ್ದು ರಾಕ್ಷಸ ಸಂಸ್ಕೃತಿ ನಡೆಸುತ್ತಿದ್ದಾರೆ. ಅವರನ್ನ ಕೇಂದ್ರ ಕಾರಗೃಹಕ್ಕೆ ಶಿಪ್ಟ್ ಮಾಡಬೇಕು ಎಂದು ವಿಚಾರಾಧೀನ ಖೈದಿ ಹೇಳಿದ್ದಾರೆ.