ಗೋವಿನಜೋಳ ತೆನೆ ರಾಶಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ಲಕ್ಷ್ಮೇಶ್ವರ: ಪಟ್ಟಣದ ಪೇಠಬಣದ ವ್ಯಾಪ್ತಿಯ ಹೊಲದಲ್ಲಿ ಬುಧವಾರ ಮಧ್ಯಾಹ್ನ ಗೋವಿನಜೋಳದ ತೆನೆಯ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ೧೦೦ ಕ್ವಿಂಟಲ್‌ಗೂ ಅಧಿಕ ಗೋವಿನಜೋಳ ಬೆಂಕಿಗಾಹುತಿಯಾಗಿದೆ.
ಶರಣಪ್ಪ ಪರಮೇಶ್ವರಪ್ಪ ಬಟಗುರ್ಕಿ ಹಾಗೂ ಸೋಮಶೇಖರ ವೀರಭದ್ರಪ್ಪ ಜವಳಿ ಅವರಿಗೆ ಸಂಬಂಧಿಸಿದ ಜಮೀನುಗಳಲ್ಲಿ ಬೆಳೆದ ಮೆಕ್ಕೆಜೋಳ(ನೀರಾವರಿ) ಬೆಳೆಯ ಒಕ್ಕಣೆ ಮಾಡಿಲು ತೆನೆಯ ರಾಶಿ ಹಾಕಿದ್ದರು. ಅಂದಾಜು ತಲಾ 50 ಕ್ವಿಂಟಲ್ ಮೆಕ್ಕೆಜೋಳ ತೆನೆಯ ರಾಶಿಗೆ ಜಮೀನಿನಲ್ಲಿದ್ದ ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾನಿಯಾಗಿದೆ, ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಹತೋಟಿಗೆ ತಂದರು. ಅಷ್ಟರಲ್ಲಿಯೇ ಲಕ್ಷಾಂತರ ರೂ. ಮೌಲ್ಯದ ಬೆಳೆ ಬೆಂಕಿಯ ಕೆನ್ನಾಲಗೆ ಸಿಲುಕಿ ಕರಕಲಾಗಿದೆ. ಕಂದಾಯ ಇಲಾಖೆ ಗ್ರಾಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.