ಗೋಕಾಕನಲ್ಲಿ ಹುಬ್ಬಳ್ಳಿಯ ಎಎಸ್ಐ ಹೃದಯಾಘಾತದಿಂದ ಸಾವು

ಬೆಳಗಾವಿ: ಗೋಕಾಕ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಕಾರ್ಯಕ್ಕೆ ಬಂದಿದ್ದ ಹುಬ್ಬಳ್ಳಿಯ ಎಎಸ್ಐ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರನ್ನು ಹುಬ್ಬಳ್ಳಿ ಎಪಿಎಂಸಿ ಠಾಣೆಯ ಎಎಸ್ಐ ಎಲ್ ಜೆ ಮೀರಾನಾಯಕ್ ಎಂದು ಗುರುತಿಸಲಾಗಿದೆ. ಗೋಕಾಕ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ
ಬಂದೋಬಸ್ತಿಗೆ ಬಂದಿದ್ದ ಎಎಸ್ಐ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.