ಚಿತ್ರದುರ್ಗ: ತಾಲೂಕಿನ ಸಿಬಾರ ಬಳಿ ಶುಕ್ರವಾರ ಗಾಂಜಾ ದಂಧೆಕೋರ ಕಮ್ರಾನ್ ಬಂಧನದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳುವ ಸಂದರ್ಭ ಕಾಲಿಗೆ ಗುಂಡು ಹಾರಿಸಿದ ಘಟನೆ ಜರುಗಿದೆ.
ಆರೋಪಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಎಎಸ್‌ಐ ದಿವಾಕರ್ ಬೈಕ್‌ಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ಪರಾರಿಯಾಗಿದ್ದ ಕಮ್ರಾನ್ ಬಂಧನಕ್ಕೆ ಪೊಲೀಸ್ ತಂಡ ರಚಿಸಲಾಗಿತ್ತು. ಸಿಬಾರದ ಬಳಿ ಆರೋಪಿ ಇದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ತೆರಳಿದ್ದಾಗ, ಪೊಲೀಸ್ ಪೇದೆ ತಿಮ್ಮರಾಯಪ್ಪ ಅವರಿಗೆ ಕಮ್ರಾನ್ ಜಾಕುವಿನಿಂದ ಇರಿದಿದ್ದಾನೆ. ತಕ್ಷಣ ಸಿಪಿಐ ಗುಂಡು ಹಾರಿಸಿದ್ದಾರೆ. ಪೇದೆ ತಿಮ್ಮರಾಯಪ್ಪ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು.