ಗದಗ ಒಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರ

ಗದಗ: ಗದಗ ಒಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಇಂದು ಅಮೃತ ಭಾರತ ರೈಲ್ವೆ ಸ್ಟೇಶನ್‌ ಯೋಜನೆಯಡಿ ಪುನರಾಭಿವೃದ್ಧಿಗೊಂಡ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್‌ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು, ಈ ವೇಳೆ ಪುನರಾಭಿವೃದ್ಧಿಗೊಂಡ ಈ ರೈಲ್ವೆ ನಿಲ್ದಾಣಗಳಲ್ಲಿ, ನೈರುತ್ಯ ರೈಲ್ವೆ ವಲಯದ ಗದಗ ರೈಲ್ವೆ ನಿಲ್ದಾಣವು ಒಂದಾಗಿದ್ದು ಇಂದು ಈ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣಗಳಣ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೋಂಡಿದ್ದು ಕುಮಾರ ವ್ಯಾಸರ ತವರೂರು ಗದಗವು ಐತಿಹಾಸಿಕ ಪರಂಪರೆಯ ಸ್ಥಳವಾಗಿದೆ. ಸಂಗೀತ ದಿಗ್ಗಜ ಭೀಮಸೇನ ಜೋಶಿ ಅವರ, ಪಂಡಿತ ಪುಟ್ಟರಾಜ ಗವಾಯಿಗಳ, ತೊಂಟದ ಸಿದ್ಧಲಿಂಗ ‌ಶಿವಾಚಾರ್ಯರ ಕ್ಷೇತ್ರ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗವಾದ ಪಟ್ಟದಕಲ್ ಹಾಗೂ ಐತಿಹಾಸಿಕ ಮತ್ತು ವಾಸ್ತುಶಿಲ್ಪ ತಾಣಗಳಾದ ಲಕ್ಕುಂಡಿ, ಬಾದಾಮಿ, ಗದಗಿನ ಅಕ್ಕ-ಪಕ್ಕದಲ್ಲಿರುವುದರಿಂದ, ಗದಗ ಒಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದೆ. ಗದಗ, ಧಾರವಾಡ ಸೇರಿದಂತೆ ನಮ್ಮ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ, ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ತಿಳಿಸಿದ್ದಾರೆ.

ನೈರುತ್ಯ ರೈಲ್ವೆ ವಲಯ ಗದಗನ ಪುನರಾಭಿವೃದ್ಧಿಗೊಂಡ ರೈಲ್ವೆ ನಿಲ್ದಾಣ: 23.24 ಕೋಟಿ ಅನುದಾನದಲ್ಲಿ ಪುನರಾಭಿವೃದ್ಧಿಗೊಂಡ ಗದಗ ರೈಲ್ವೆ ನಿಲ್ದಾಣದಲ್ಲಿ ಜಿ+1 ಮಾದರಿ ಕಟ್ಟಡ, ಪ್ಲಾಟ್‌ಫಾರ್ಮ್‌ ನಂ. 2 ರಲ್ಲಿ ಎಸ್ಕಲೇಟರ್‌, 12 ಮೀಟರ್ ಅಗಲದ ಕಾಲುದಾರಿ ಸೇತುವೆ ಮತ್ತು ಎಲ್ಲಾ ಪ್ಲಾಟ್‌ ಫಾರ್ಮ್ ಗಳಲ್ಲಿ ಲಿಫ್ಟ್‌ ಅಳವಡಿಸಲಾಗಿದೆ. ಹೊರ ಆವರಣದಲ್ಲಿ ಬಸ್‌ ಬೇ, ಆಟೊ ಬೇ, ಪಾರ್ಕಿಂಗ್ ಏರಿಯಾ, ಸ್ಟೇಷನ್‌ ಮ್ಯಾನೇಜರ್‌ ಕೊಠಡಿ, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ದೇಶಾದ್ಯಂತ ಒಟ್ಟು 1275 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ರೈಲ್ವೆ ಸ್ಟೇಷನ್‌ ಯೋಜನೆಯಡಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 500 ರೈಲ್ವೆ ನಿಲ್ದಾಣಗಳ ನವೀಕರಣ ಕಾಮಗಾರಿ ಆರಂಭವಾಗಿದ್ದು, ಸದ್ಯ ಕಾಮಗಾರಿ ಪೂರ್ಣಗೊಂಡ ನೈರುತ್ಯ ರೈಲ್ವೆ ವಲಯದ 5 ರೈಲ್ವೆ ನಿಲ್ದಾಣಗಳು ಸೇರಿದಂತೆ ಇಂದು 103 ರೈಲು ನಿಲ್ದಾಣಗಳನ್ನು ಪ್ರಧಾನಿ ಅವರು ಉದ್ಘಾಟಿಸಿದರು.