ಗಣೇಶ ವಿಗ್ರಹಕ್ಕೆ ಅಗೌರವ ಆರೋಪ: ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!

ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯನಡೆದಿದೆ. ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲು ಚರಂಡಿಗೆ ಬಿಸಾಡಿದ ಆರೋಪ ಮಾಡಲಾಗಿದೆ.

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗೊಂದಲದ ವಾತವರಣ ನಿರ್ಮಾಣವಾಗಿದೆ. ಅನ್ಯಕೋಮಿನ ಯುವಕರ ದುಷ್ಕೃತ್ಯಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ವಾರ್ಡ್ ನ ಬಂಗಾರಪ್ಪ ಬಡಾವಣೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಐ ಸತ್ಯನಾರಾಯಣ, ಜಯನಗರ ಠಾಣೆ ಪಿಐ ಸಿದ್ದೇಗೌಡ ಭೇಟಿ ನೀಡಿದ್ದಾರೆ.

ಸ್ಥಳೀಯರ ಜೊತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ದೂರು ನೀಡಿ, ತಪ್ಪಿತಸ್ಥರನ್ನ ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳ ಭರವಸೆ ನೀಡಿದ್ದಾರೆ.ಬಂಗಾರಪ್ಪ ಬಡಾವಣೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ-ಭದ್ರತೆಗೊಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ಪ್ರಾಥಮಿಕ ಹಂತದಲ್ಲಿ ವಿಗ್ರಹವನ್ನ‌ ಕೆಳಗೆ ಬೀಳಿಸಲಾಗಿತ್ತು. ಈಗ ಅದನ್ನ ಮೊದಲು ಹೇಗಿತ್ತೋ ಹಾಗೆ ಇರಿಸಲಾಗಿದೆ. ಸಾರ್ವಜನಿಕರ ಬಳಿ ಇಬ್ವರು ಬಂದು ಮಾತನಾಡಿದ ವಿಡಿಯೋವೊಂದಿದೆ. ಪರಿಶೀಲನೆ ನಡೆಸಿ ನಂತರ ಯಾರು ಅದನ್ನ ಮಾಡಿದ್ದಾರೆ. ಉದ್ದೇಶವೇನು ಎಂಬುದು ಬೆಳಕಿಗೆ ಬರಲಿದೆ ಎಂದರು.

ರಾಗಿ ಗುಡ್ಡದಲ್ಲಿ ಬೂಗಿಲೆದ್ದಿರುವ ಘಟನೆ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಪೊಲೀಸರಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸ್ಥಳದಲ್ಲಿ ದೇವಸ್ಥಾನ ಇದ್ದು ಎದುರುಗಡೆ ಇರುವ ಸರ್ಕಾರಿ ಜಾಗವನ್ನು ಕೋಮಿನವರು ಕಬಳಿಸಿ ಮನೆ ಕಟ್ಟುತ್ತಿದ್ದು ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಸರ್ಕಾರ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಕಟ್ಟಲಾಗುತ್ತಿದೆ. ದಿನ ಬೆಳಿಗ್ಗೆ ಎದ್ದರೆ ಹಿಂದೂ ದೇವರ ಮುಖ ನೋಡಲಾಗುತ್ತಿದೆ ಎಂದು ಆಕ್ಷೇಪಿಸಿ ದೇವರ ವಿಗ್ರಹ ಭಗ್ನಗೊಳಿಸಿದ್ದಾರೆ ಎಂದು ಶಾಸಕರು ದೂರಿದ್ದಾರೆ.

ರಾಗಿಗುಡ್ಡದಲ್ಲಿ ಸೌಹಾರ್ಧ ಹಾಳು ಮಾಡುತ್ತಿರುವ ಅನ್ಯ ಕೋಮಿನವರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕರು ಪೊಲೀಸರಿಗೆ ಆಗ್ರಹಿಸಿದ್ದಾರೆ.