ಗಣಿ ಜಿಲ್ಲೆ ಬಳ್ಳಾರಿಯ ಟಿ. ವಿಜಯಕುಮಾರ್‌ ಯುಪಿಎಸ್ ನಲ್ಲಿ 894ನೇ ‍ರ್‍ಯಾಂಕ್‌


ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ಕೃಷಿ ಕುಟುಂಬದ ಯುವಕ ಯುಪಿಎಸ್‌ಸಿಯಲ್ಲಿ 894ನೇ ರ್ಯಾಂಕ್ ಪಡೆದು ಸಾಧನೆಗೈದಿದ್ದಾರೆ.
ಚೋರನೂರು ಗ್ರಾಮದ ಕೃಷಿಕ ಅಡಿವೆಪ್ಪ ಹಾಗೂ ನಿವೃತ್ತ ಶಿಕ್ಷಕಿ ಮಣಿಯಮ್ಮ ದಂಪತಿಯ ತೃತೀಯ ಪುತ್ರ ಟಿ . ವಿಜುಕುಮಾರ ಇಂತಹ ಸಾಧನೆ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಟಿ.ವಿಜಯಕುಮಾರ್ ಅವರು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯ ಜವಾಹರ್‌ ನವೋದಯ ಶಾಲೆಯಲ್ಲಿ1-10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಪಿಯು ಶಿಕ್ಷಣವನ್ನು ಹೈದ್ರಾಬಾದ್‌ನ ನಾರಾಯಣ ಕಾಲೇಜಿನಲ್ಲಿಹಾಗೂ ಪದವಿಯನ್ನು ಬೆಂಗಳೂರಿನಲ್ಲಿಪೂರೈಸಿದ್ದಾರೆ. ಕೆಎಸ್‌ಪಿಎಸ್‌ ಪೂರ್ಣಗೊಳಿಸಿ ಡಿವೈಎಸ್ಪಿಯಾಗಿ ಮೈಸೂರಿನಲ್ಲಿತರಬೇತಿ ಪಡೆದು, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದರೊಂದಿಗೆ ಯುಪಿಎಸ್‌ಸಿಯಲ್ಲಿ ಕಳೆದ 2023ರಲ್ಲಿ 953 ರ್ಯಾಂಕ್‌ ಪಡೆದು ಲಖನೌದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2024ರಲ್ಲಿಪುನಃ ಯುಪಿಎಸ್‌ ಪರೀಕ್ಷೆಯನ್ನು ಎದುರಿಸಿ ಈಗ 894ನೇ ರ್ಯಾಂಕ್‌ ಪಡೆದು ಗಮನಸೆಳೆದಿದ್ದಾರೆ.