ಟೆಲ್ ಅವೀವ್: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಧುನಿಕ ಯುಗದ ಹಿಟ್ಲರ್. ಇಸ್ರೇಲ್ ನಾಶ ಮಾಡುವ ಅವರ ಗುರಿ ಈಡೇರಿಸಲು ಬಿಡುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಪ್ರತಿಜ್ಞೆ ಮಾಡಿದ್ದಾರೆ. ಖಮೇನಿಯನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್)ಗೆ ಸೂಚಿಸಲಾಗಿದೆ ಎಂದೂ ಹೇಳಿಕೊಂಡಿದ್ದಾರೆ. ತಮ್ಮ ಗುರಿ ಸಾಧಿಸಲು ಎಲ್ಲಾ ಸಂಪನ್ಮೂಲ ಬಳಸುವುದಕ್ಕೂ ಆತ ಹಿಂದೇಟು ಹಾಕುತ್ತಿಲ್ಲ. ಜನರನ್ನು ಬಲಿಪಶು ಮಾಡುವುದಕ್ಕೂ ಸಿದ್ಧರಾಗಿದ್ದಾರೆ. ಆಸ್ಪತ್ರೆಗಳು ಹಾಗೂ ವಸತಿ ಕಟ್ಟಡಗಳ ಮೇಲೆ ಗುಂಡುಹಾರಿಸುವುದಕ್ಕೆ ಖಮೇನಿಯೇ ಖುದ್ದು ಆದೇಶ ಹೊರಡಿಸಿದ್ದಾರೆ ಎಂದಿದ್ದಾರೆ. ಇರಾನಿನ ಪರಮಾಣು ಕಾರ್ಯಕ್ರಮ ನಾಶ ಮಾಡುವ ದಿಸೆಯಲ್ಲಿ ಖಮೇನಿಯನ್ನೂ ಜೀವಂತ ಇರಲು ಬಿಡುವುದಿಲ್ಲ. ಈ ಸಂಬಂಧ ಐಡಿಎಫ್‌ಗೆ ಸೂಚಿಸಲಾಗಿದೆ ಎಂದಿದ್ದಾರೆ.