ಕೋಳಿ ಲಿವರ್ ಅನ್ನು ನಾಯಿಮಾಂಸ ಎಂದು ಭಾವಿಸಿ ಪ್ರತಿಭಟಿಸಿದ ಕಿಡಿಗೇಡಿಗಳು!

ಮಂಡ್ಯ: ಅಂಗಡಿಗಳಿಗೆ ಕೋಳಿ ಲಿವರ್ ಸರಬರಾಜು ಮಾಡುವುದನ್ನು ನಾಯಿ ಲಿವರ್ ಎಂದು ಬಾವಿಸಿ ಅನ್ಯಕೋಮಿನ ವ್ಯಕ್ತಿಯ ಹೋಟೇಲ್ ಹಾಗೂ ಆತನ ಮೇಲೆ ಅಪಪ್ರಚಾರ ನಡೆಸಲು ಕಿಡಿಗೇಡಿಗಳು ವಿಫಲ ಯತ್ನ ನಡೆಸಿರುವ ಘಟನೆ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಲ್ಲಿ ನಡೆದಿದೆ.

ಚಿನಕುರಳಿ ಗ್ರಾಮದಲ್ಲಿಅಜಾದ್ ಎಂಬ ವ್ಯಕ್ತಿ ಮದೀನಾ ಎಂಬ ಹೆಸರಿನ ಹೋಟೇಲ್ ನಡೆಸುತ್ತಿದ್ದು, ಈ ಅಂಗಡಿಗೆ ವ್ಯಕ್ತಿಯೊಬ್ಬ ಕೋಳಿಗಳ ಲಿವರ್ ಸರಬರಾಜು ಮಾಡಲು ಬಂದಾಗ ಕೆಲವು ಕಿಡಿಗೇಡಿಗಳು ನಾಯಿಮಾಂಸ ಎಂದು ಅಪಪ್ರಚಾರ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ.

ನಂತರ ಪಾಂಡವಪುರ ಪೊಲೀಸರು ಅಜಾದ್ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ಅದು ಕೋಳಿಯ ಲಿವರ್ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.