ಕೆರೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಆತ್ಮಹತ್ಯೆ

ಮೈಸೂರು: ಮಗಳು ಮನೆ ಬಿಟ್ಟು ಹೋದ ಕಾರಣಕ್ಕೆ ಮನನೊಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ‌ ಪ್ರಕರಣ‌ ಎಚ್.ಢಿ.ಕೋಟೆ ತಾಲೂಕಿನ ಬೂದನೂರಿನಲ್ಲಿ‌ ನಡೆದಿದೆ.‌
ಮೂವರ ಮೃತ ದೇಹ ಪತ್ತೆಯಾಗಿದ್ದು‌ ತಂದೆ ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ‌ಎಂದು ‌ಗುರುತಿಸಲಾಗಿದೆ. ಹಗ್ಗವನ್ನ ಕಟ್ಟಿಕೊಂಡು ಮೂವರು ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು‌ ಅಗ್ನಿಶಾಮಕ ಸಿಬ್ಬಂದಿ ದೇಹವನ್ನು‌ ಹೊರಗೆ ತೆಗೆದಿದ್ದಾರೆ.
ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಗಳು ‌ಅಂತರ ಜಾತಿ ವಿವಾಹವಾಗಿದ್ದು ಇದರಿಂದ‌ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.