ಕೆಂಪು ಕಲ್ಲು ಅಕ್ರಮ ಸಾಗಾಟ : ಕೆಡಿಪಿ ಸಭೆಯಲ್ಲಿ ಚರ್ಚೆ

ಮಂಗಳೂರು: ಅಕ್ರಮವಾಗಿ ನಡೆಯುತ್ತಿರುವ ಕೆಂಪು ಕಲ್ಲು ಹಾಗೂ ಮರಳು ಸಾಗಾಟ ಕಾನೂನು ಉಲ್ಲಂಘಿಸಿ ಮಾಡಲು ಸಾಧ್ಯವಿಲ್ಲ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಂಪು ಕಲ್ಲು ಹಾಗೂ ಮರಳು ಸಾಗಾಟ ಕಾನೂನು ಉಲ್ಲಂಘಿಸಿ ಮಾಡಲು ಸಾಧ್ಯವಿಲ್ಲ, ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನು ಮಾಡುತ್ತೇವೆ. ಇಷ್ಟು ದಿನ ಯಾವ ರೀತಿಯಲ್ಲಿ ಇದನ್ನ ಮಾಡುತ್ತಿದ್ದರು? ಈ ಬಗ್ಗೆ ಹಿರಿಯ ಅಧಿಕಾರಿಗಳ ಬಗ್ಗೆ ಚರ್ಚಿಸಿ ಸಡಿಲ ಮಾಡುವ ಕ್ರಮವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡುತ್ತೇವೆ, ಮೂರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದು ತಿರುಕನ ಕನಸು, ಜನ‌ ಅವರನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಪಕ್ಷ ಸುಭದ್ರವಾಗಿದೆ, ಬಿಜೆಪಿಯವರ ಪಕ್ಷದಲ್ಲಿ ಏನು ಸರಿ ಇದೆ? ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಇದೆ. ಅವರನ್ನು ಅವರು ಉಳಿಸುವುದನ್ನು ನೋಡಿಕೊಳ್ಳಲಿ, ಸುರ್ಜೆವಾಲ ಅವರು ರಾಜ್ಯದ ಎಲ್ಲಾ ಶಾಸಕರನ್ನು ಭೇಟಿಯಾಗಲಿದ್ದಾರೆ. ಅವರಲ್ಲಿರುವ ಅಭಿಪ್ರಾಯಗಳನ್ನು‌ ಸಂಗ್ರಹಿಸಿ ನಂತರ ಮುಂದಿನ‌ ಕ್ರಮ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅತ್ಯಂತ ದೊಡ್ಡ ಪಕ್ಷ ಹಲವರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ನಾನು ಅವರನ್ನು ಭೇಟಿಯಾಗುತ್ತೇನೆ, ನಮ್ಮ ಆಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ ಎಂದರು. ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ಇದೆ. ಭ್ರಷ್ಟಾಚಾರ ಇಲ್ಲಾ ಅಂತ ಹೇಳಕ್ಕಾಗಲ್ಲ. ಇದನ್ನು ನಾವು ನಿರ್ಮೂಲನೆ ಮಾಡಬೇಕು, ಬಿಜೆಪಿಯವರ ಹೇಳಿಕೆಯನ್ನು ನಾನು‌ ಗಮನಿಸಿದ್ದೇನೆ, ಮೂರು ತಿಂಗಳಲ್ಲಿ ಸರ್ಕಾರ ಬಿದ್ದು ಹೊಗುತ್ತೆ ಎಂದು ಹೇಳುತ್ತಿದ್ದಾರೆ, ಅದು ತಿರುಕನ ಕನಸು, ಜನ‌ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದರು.