ಕುಳಗೇರಿ ಕ್ರಾಸ್‌ನಲ್ಲಿ ಆಧಾರ್‌ಗಾಗಿ ಅಲೇದಾಟ…

ಆಧಾರ್ ಕೇಂದ್ರ ಬಂದ್: ಮರು ಪ್ರಾರಂಭಿಸಲು ಸಾರ್ವಜನಿಕರ ಒತ್ತಾಯ

ಆರ್ ಎಸ್ ಹಿರೇಮಠ.

ಬಾಗಲಕೋಟೆ (ಕುಳಗೇರಿ ಕ್ರಾಸ್) : ಇಲ್ಲಿಯ ನಾಡ ಕಾರ್ಯಾಲಯದಲ್ಲಿ ಆಧಾರ್ ಆಪರೇಟರ್ ಐ.ಡಿ ಬಂದ್ ಮಾಡಲಾಗಿದೆಯಂತೆ. ಸಾರ್ವಜನಿಕರು ಆಧಾರ್ ಕಾರ್ಡ್‌ಗಾಗಿ ದಿನಂಪ್ರತಿ ನಾಡ ಕಛೇರಿಯ ಬಾಗಿಲು ತಟ್ಟುತ್ತಿದ್ದಾರೆ.
ಆಧಾರ್ ಕಾರ್ಡ್ ಬೇಕಾದರೆ ಬಾದಾಮಿಗೆ ಹೋಗ್ರಿ… ಇಲ್ಲಾ ಕೆರೂರ ಹೋಗ್ರಿ…. ಆಧಾರ್ ಕೇಂದ್ರ ಬಂದ್ ಮಾಡಲಾಗಿದೆ. ಸದ್ಯ ಪ್ರಾರಂಭವಾಗುವ ಯಾವ ಲಕ್ಷಣಗಳು ಇಲ್ಲ ಎಂದು ನಾಡ ಕಾರ್ಯಾಲದಲ್ಲೇ ಹೇಳಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯ ಬಹುತೇಕ ಆಧಾರ್ ಕೇಂದ್ರಗಳನ್ನ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸದ್ಯ ಕುಳಗೇರಿ ನಾಡ ಕಛೇರಿಯಲ್ಲಿ ಆಧಾರ್ ಕೇಂದ್ರ ರದುಗೊಳಿಸಿದ್ದಾರೆ ಎಂಬ ಮಾಹಿತಿ ಇದೆ. ಸುಮಾರು ಐದಾರು ದಿನಗಳಿಂದ ಆಧಾರ್ ಕೇಂದ್ರ ಬಂದ್ ಮಾಡಲಾಗಿದ್ದು ಸದ್ಯ ಆಧಾರ್‌ಗಾಗಿ ಸಾರ್ವಜನಿಕರ ಅಲೇದಾಟ ಶುರುವಾಗಿದೆ.

ಸದ್ಯ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೀಗಾಗಿ ಹೊಸದಾಗಿ ಆಧಾರ ಕಾರ್ಡ್ ಮಾಡುವುದು, ತಿದ್ದುಪಡಿ, ಪೋನ್ ನಂಬರ್ ದಾಖಲು ಮಾಡುವುದು ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್ ಬೇಕು. ಅದಕ್ಕಾಗಿ ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ಅಲೇಯುವ ಪರಿಸ್ಥಿತಿ ಬಂದೊದಗಿದೆ.

ಸುಮಾರು ೧೪ ಸಾಜಾಗಳಿರುವ ಕುಳಗೇರಿ ಹೋಬಳಿ ಮಟ್ಟ 40ಕ್ಕೂ ಹೆಚ್ಚು ಗ್ರಾಮಗಳನ್ನ ಹೊಂದಿದೆ. ಇಲ್ಲಿ ಕಡ್ಡಾಯವಾಗಿ ಆಧಾರ್ ಕೇಂದ್ರ ಬೇಕೆ ಬೇಕು. ಆಧಾರ್ ಸಮಸ್ಯೆಯಾದರೆ 20ರಿಂದ 35 ಕಿಮೀ ದೂರ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಅಷ್ಟು ದೂರ ಹೋಗುವುದಾದರೂ ಹೇಗೆ ಎಂದು ಪ್ರಶ್ನೀಸುತ್ತಿರುವ ಗ್ರಾಮಸ್ಥರು ಆಧಾರ್ ನೊಂದಣಿ ಕೇಂದ್ರ ಮತ್ತೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಮರು ಪ್ರಾರಂಬಿಸಲು ಪ್ರಯತ್ನ: ಆಧಾರ ಕೇಂದ್ರ ರದ್ದುಗೊಳಿಸುವಂತೆ ಜಿಲ್ಲಾದಿಕಾರಿಯವರೇ ಆದೇಶ ಮಾಡಿದ್ದಾರಂತೆ ನನಗೂ ಸಂಪೂರ್ಣ ಮಾಹಿತಿ ಇಲ್ಲ. ಯಾವುದಕ್ಕೆ ಆಧಾರ್ ಐ.ಡಿ ಡಿಲಿಟ್ ಮಾಡಿದ್ದಾರೆ ಮಾಹಿತಿ ಪಡೆಯುತ್ತೆನೆ. ಮನವಿ ಸಲ್ಲಿಸಿದರೆ ಮರು ಪ್ರಾರಂಬಿಸಲು ಪ್ರಯತ್ನ ಮಾಡುತ್ತೆನೆ ಎಂದು ನೂತನ ತಹಸಿಲ್ದಾರ್ ಕಾವ್ಯಾಶ್ರೀ ಎಚ್. ತಿಳಿಸಿದ್ದಾರೆ.