ಹೊಸದುರ್ಗ: ಕುರಿಗಳ ಮೈ ತೊಳೆಯಲು ಹೋಗಿದ್ದ ದಂಪತಿ ನೀರು ಪಾಲಾಗಿರುವ ಘಟನೆ ತಾಲೂಕಿನ ಅತ್ತಿಮಗ್ಗೆ ಮೇಗಳಹಟ್ಟಿ ಗ್ರಾಮದ ಸಮೀಪದ ಖಾನಿ ಹಳ್ಳದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಅತ್ತಿಮಗ್ಗೆ ಮೇಗಳಹಟ್ಟಿ ಗ್ರಾಮದ ಕುರಿಗಾಯಿ ತಿಮ್ಮಣ್ಣ (೩೫), ಈತನ ಪತ್ನಿ ಪುಟ್ಟಮ್ಮ (೩೦) ನೀರು ಪಾಲದ ದಂಪತಿ.ತಿಮ್ಮಣ್ಣ ಮತ್ತು ಪುಟ್ಟಮ್ಮ ಇಬ್ಬರೂ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ತಮ್ಮದೆ ಕುರಿಗಳನ್ನು ಮೇಯಿಸುವ ಹೋಗಿದ್ದರು.
ಮಧ್ಯಾಹ್ನ ೨.೩೦ರ ಸಮಯದಲ್ಲಿ ಕುರಿಗಳ ಮೈ ತೊಳೆಯುವ ಸಲುವಾಗಿ ಖಾನಿಹಳ್ಳ (ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶ)ದಲ್ಲಿ ಕುರಿಗಳನ್ನು ತೊಳೆಯುವ ವೇಳೆ ತಿಮ್ಮಣ್ಣ ಕಾಳು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಪುಟ್ಟಮ್ಮ ಗಂಡನನ್ನು ಎಳೆದುಕೊಳ್ಳಲು ಹೋದಾಗ ಈಕೆಯೂ ಕಾಲು ಜಾರಿ ಬಿದ್ದು ಇಬ್ಬರು ನೀರು ಪಾಲಾಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು, ರಕ್ಷಣಾ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪುಟ್ಟಮ್ಮನ ಶವ ತೆಗೆದರು. ಕತ್ತಲು ಆವರಿಸಿದ್ದರಿಂದ ತಿಮ್ಮಣ್ಣನ ದೇಹ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಐದು ಮತ್ತು ಎರಡನೇ ತರಗತಿ ಓದುತ್ತಿದ್ದಾರೆ. ತಿಮ್ಮಪ್ಪನ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಸಿಪಿಐ ರಮೇಶ್ ತಿಳಿಸಿದ್ದಾರೆ.