ಕಿಲ್ಲರ್ ಟಿಪ್ಪರ್ ಗೆ ನವವಿವಾಹಿತ ಬಲಿ: ಪತ್ನಿಗೆ ಗಾಯ

ಬೆಳಗಾವಿ: ನವದಂಪತಿಗಳು ಪ್ರಯಾಣಿಸುತ್ತಿದ್ದ ಬೈಕಿಗೆ ಕಿಲ್ಲರ್ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೆ ಕೊನೆಯುಸಿರೆಳೆದ ಘಟನೆ ಅಗಸಗಿ ಬಳಿ ನಡೆದಿದೆ.

ಬೆಳಗಾವಿ ತಾಲ್ಲೂಕಿನ ದಾಮಣಿ ಗ್ರಾಮದ ಯುವಕ ಬೀರಪ್ಪ ಲಕ್ಮಣ ಸೈಬಣ್ಣವರ್ ಸಾವನ್ನಪ್ಪಿದ ಯುವಕ. ಪತ್ನಿ ಶ್ರೀದೇವಿ ಗಂಭೀರ ಗಾಯಗೊಂಡು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.