ಕಾಸು ಕೊಟ್ಟರೆ ಯಾವ ತಂಡಕ್ಕೆ ಬೇಕಾದರೂ ಆಡುತ್ತಾರೆ

ಸಿ.ಟಿ. ರವಿ

ಇಂದು ನೀವು ಯಾರನ್ನ ಆರ್.ಸಿ.ಬಿ ಎಂದು ಕರೆಯುತ್ತೀರಾ ಕಾಸು ಕೊಟ್ಟರೆ ಅವನು ಜೆಸಿಬಿ ಕಡೆ ಹೋಗಿರುತ್ತಾನೆ: ಐಪಿಎಲ್ ಹಿನ್ನೆಲೆ ಸಿ.ಟಿ. ರವಿ ವ್ಯಂಗ್ಯ

ಸಂ.ಕ. ಸಮಾಚಾರ ಮೈಸೂರು: ಆರ್.ಸಿ.ಬಿಯಲ್ಲಿ ಕನ್ನಡಿಗರು ಎಷ್ಟು ಜನ ಇದ್ದಾರ ಹೇಳಿ? ಕಾಸು ಕೊಟ್ಟರೆ ಯಾವ ತಂಡಕ್ಕೆ ಬೇಕಾದರೂ ಆಡುತ್ತಾರೆ. ನಮ್ಮ ಸೈನಿಕರಿಗೆ ಇಷ್ಟು ಪ್ರಚಾರ ಹಾಗೂ ಅಭಿಮಾನಿಗಳು ಯಾಕೆ ಇಲ್ಲ ಹೇಳಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐಪಿಎಲ್‌ನಲ್ಲಿ ಆಟಗಾರರನ್ನ ಹಣದ ಮೇಲೆ ತಂಡಗಳು ಖರೀದಿ ಮಾಡುತ್ತವೆ. ಈ ಹಿಂದೆ ರಣಜಿ ಅಂದರೆ ರಾಜ್ಯಗಳ ನಡುವೆ ಪಂದ್ಯಗಳು ನಡೆಯುತ್ತ ಇತ್ತು. ಆಟಗಾರರು ರಾಜ್ಯವನ್ನ ಪ್ರತಿನಿಧಿಸುತ್ತದ್ದರು. ಟೆಸ್ಟ್ ಹಾಗೂ ಒನ್ ಡೇ ಮ್ಯಾಚ್‌ಗಳು ದೇಶವನ್ನ ಪ್ರತಿನಿಧಿಸುತ್ತಿತ್ತು. ಎಪಿಎಲ್ ಕಾಕ್ ಟೇಲ್ ಇದ್ದ ಹಾಗೇ. ದುಡ್ಡು ಯಾರಿಗೆ ಹೆಚ್ಚು ಕೊಡುತ್ತಾರೆ ಅವರು ಒಂದು ತಂಡದ ಪರವಾಗಿ ಆಡುತ್ತಾರೆ ಎಂದರು.
ಇದು ನಮ್ಮ ರಾಜ್ಯದ ಟೀಂ ಅನಿಸಿಲ್ಲ. ಎಲ್ಲಾ ರಾಜ್ಯದವರು ಇರುತ್ತಾರೆ. ಐಪಿಎಲ್‌ನಲ್ಲಿರುವುದು ಹಣ ಮಾತ್ರ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮಾಡಲು ಸಾಕಷ್ಟು ಕೆಲಸ ಇದೆ. ಐಪಿಎಲ್ ಇರುವುದೇ ಹಣಕ್ಕೆ. ಹಣಕ್ಕಾಗಿ ಹಾರಾಜು ಮಾಡುತ್ತಾರೆ, ಓಪನ್ ಆಗಿ ಹಾರಾಜು ಕೂಗಿ ಆಟಗಾರರನ್ನ ಖರೀದಿ ಮಾಡುತ್ತಾರೆ. ಅಲ್ಲಿ ಯಾವ ರಾಷ್ಟ್ರೀಯ ವಾದವೂ ಇಲ್ಲ. ಇಂದು ನೀವು ಯಾರನ್ನ ಆರ್.ಸಿ.ಬಿ ಎಂದು ಕರೆಯುತ್ತೀರಾ ಕಾಸು ಕೊಟ್ಟರೆ ಅವನು ಜೆಸಿಬಿ ಕಡೆ ಹೋಗಿರುತ್ತಾನೆ. ನಾವು ಜೀವ ಕೊಡುವ ಸೈನಿಕರಿಗೆ ಆಧ್ಯತೆ ಕೊಡಬೇಕು.
ಅನ್ನ ಬೆಳೆಯುವ ರೈತರ ಬಗ್ಗೆ ತಲೆ ಕೆಡಿಸಿಕೊಳ್ಳೊಣ ಎಂದು ಅವರು ಕಿವಿಮಾತು ಹೇಳಿದರು. ಈ ದೇಶದಲ್ಲಿ ಹೆಚ್ಚು ಬೆಲೆ ಸಿಗಬೇಕಿರುವುದು ದೇಶ ಕಾಯುವ ಸೈನಿಕನಿಗೆ ಮತ್ತು ಅನ್ನ ಬೆಳೆಯುವ ರೈತನಿಗೆ. ಕ್ರಿಕೆಟ್ ಅನ್ನು ಒಂದು ಕ್ರೀಡೆಯಾಗಿ ನೋಡೋಣ ಎಂದರು.