ಕಾಳಹಂಸ್ತೇಂದ್ರ ಮಹಾಸ್ವಾಮಿಗಳಿಂದ ಧಾರ್ಮಿಕ ಪ್ರವಚನ ನಾಳೆ


ಚಳ್ಳಕೆರೆ: ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಾಳೆ, ಜುಲೈ 6, 2025 ರ ಭಾನುವಾರ ಸಂಜೆ 6:30 ಕ್ಕೆ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಶಹಪುರ ತಾಲೂಕಿನ ವಿಶ್ವಕರ್ಮ ಏಕದಂಡಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಕಾಳಹಂಸ್ತೇಂದ್ರ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ.
ವಿಶ್ವಕರ್ಮ ಸಮಾಜ ಚಳ್ಳಕೆರೆ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜದ ಕಾರ್ಯದರ್ಶಿ ಸಿ.ಇ. ಪ್ರಸನ್ನ ಮತ್ತು ಅಧ್ಯಕ್ಷ ಎನ್. ಚಂದ್ರಶೇಖರ ಚಾರ್ ಮನವಿ ಮಾಡಿದ್ದಾರೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.