ಕಲಬುರಗಿ: ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿದ ಘಟನೆ ಸತ್ಯಾಸತ್ಯತೆ ಬಗ್ಗೆ ಬಹಿರಂಗ ಚರ್ಚೆಗೆ ಸಿಎಂ ಮತ್ತು ಡಿಸಿಎಂ ಅವರಿಗೆ ಆಹ್ವಾನ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ಅವರೇ ನೇರ ಕಾರಣ. ಅವರಿಬ್ಬರೇ ಇದಕ್ಕೆ ನೇರ ಹೊಣೆಗಾರರು, ಇದಕ್ಕೂ ವಿಮಾನ ದುರಂತಕ್ಕೂ ತುಲನೆ ಮಾಡೋದು ಬೇಡ ಎಂದರು.
ಸಿಎಂ ಅವರೇ ಖುದ್ದು ಜನರನ್ನು ಕರೆದಿದ್ದಾರೆ. ಸಿಎಂ ಅವರು ಡಿಕೆಶಿ ಮೇಲೆ ಹಾಕೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಅವರು, ಸಿಎಂ ಅವರಿಗೆ ನಾನು ಬಹಿರಂಗ ಸವಾಲ್ ಹಾಕುತ್ತೇನೆ.
ಬನ್ನಿ ಚರ್ಚೆಗೆ ಯಾರ ತಪ್ಪು ಅಂತ ನಾನು ತೋರಿಸುತ್ತೇವೆ. ಕಾಲ್ತುಳಿದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಸಿಎಂ ಹಣಕಾಸಿನ ಆಯೋಗದ ಸಭೆಗೆ ಹೋಗಿದ್ದಾರೆ. ಅದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಕೇಂದ್ರದ ಯೋಜನಾ ಆಯೋಗ ಸೇರಿದಂತೆ ಇತರ ಆಯೋಗಗಳು ನಡೆಸುವ ಸಭೆಗೆ ಹೋಗದೆ ರಾಜ್ಯದಲ್ಲೇ ಕುಳಿತು ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುತ್ತಾರೆ ಎಂದು ಆರೋಪಿಸಿದರು.
ಮೋದಿಯವರ ಸಾಧನೆಗೆ ಸಿಎಂ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಸಿದ್ದರಾಮಯ್ಯ ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ಜಿಎಸ್‌ಟಿ ಮೂಲಕ ನಮಗೆ ಅತೀ ಹೆಚ್ಚು ಅನುದಾನ ಬಂದಿದೆ. ಕೇಂದ್ರದ ನೀತಿಗಳು ಬದಲಾವಣೆಯಾಗಿದೆ. ಕೇಂದ್ರ ಯೋಜನೆಗಳಿಗೆ ಹಣ ನಿಡೋಕೆ ಇವರ ಹತ್ತಿರ ದುಡ್ಡು ಇಲ್ಲ ಎಂದು ವ್ಯಂಗವಾಡಿದರು.
ಅಹ್ಮದಾಬಾದ್ ವಿಮಾನ ದುರ್ಘಟನೆ ಆಗಬಾರದಿತ್ತು. ಜನ ಬಹಳ ನೋವಲ್ಲಿ ಇದ್ದಾರೆ. ಈ ರೀತಿ ದುರ್ಘಟನೆ ಮುಂದೆ ಆಗಬಾರದು. ಆ ನಿಟ್ಟಿನಲ್ಲಿ ತನಿಖೆ ಶುರುವಾಗಿದೆ ಎಂದರು.