ಕಾರ್ಣಿಕ ದೈವದ ಅನುಗ್ರಹ ನೆನೆದ ರೆಡ್ಡಿ

ಬೆಂಗಳೂರು: ಕಾರ್ಣಿಕ ದೈವದ ನುಡಿದ ನುಡಿ ನಿಜವಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಪೋಸ್ಟ್‌ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು,ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ನಡೆಯಬೇಕಿದ್ದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬಂಧನದ ಕಾರಣದಿಂದ ನಾನು ಭಾಗವಹಿಸಲಾಗಿಲ್ಲ. ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಕೇಳಿದಾಗ ಜನಾರ್ಧನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವವು ನುಡಿದಿತ್ತು. ದೈವ ನುಡಿದಂತೆ ನಾನು 27 ದಿನಕ್ಕೆ ಬಿಡುಗಡೆಯಾಗಿದ್ದೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹ ಎಂದಿದ್ದಾರೆ.