ಶಿವಮೊಗ್ಗ: ಕಾಂತರ-1ರ ಸಿನಿಮಾ ತಂಡ ಮಾಸ್ತಿಕಟ್ಟೆ ಸಮೀಪ ಮಾಣಿ ಜಲಾಶಯದಲ್ಲಿ ಶೂಟಿಂಗ್ ನಲ್ಲಿದ್ದಾಗ ಬೋಟ್ (ದೊಡ್ಡ ದೋಣಿ) ಮಗುಚಿ ಅವಘಡ ಸಂಭವಿಸಿದ್ದು ಯಾರಿಗೂ ಪ್ರಾಣ ಹಾನಿ ಆಗದೆ ಜೀವಾಪಾಯದಿಂದ ಪಾರಾದ ಘಟನೆ ಶನಿವಾರ ಸಂಜೆ ನಡೆದಿದೆ.
ನಟ ರಿಷಬ್ ಶೆಟ್ಟಿ, ಕ್ಯಾಮರಾಮನ್ ಸೇರಿದಂತೆ ಸುಮಾರು 30 ಜನರು ದೋಣಿಯಲ್ಲಿದ್ದರು. ಅವಘಡ ಸಂಭವಿಸಿದ ತಕ್ಷಣ ಎಲ್ಲ ಕಲಾವಿದರು, ತಂತ್ರಜ್ಞರು, ಕ್ಯಾಮರಾಮನ್ ಗಳು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ.
ಮೊನ್ನೆ ಅಷ್ಟೆ ಕಲಾವಿದ ವಿಜಿ ವಿ.ಕೆ. ಅವರ ನಿಧನಾನಂತರ ಮತ್ತೆ ಕಾಂತಾರ-1ರ ಶೂಟಿಂಗ್ ಆರಂಭಿಸಲಾಗಿತ್ತು. ಬೋಟ್ ನಲ್ಲಿದ್ದ ಸಿನಿಮಾ ಸೆಟ್ ನ ಎಲ್ಲ ಪ್ರಾಪರ್ಟೀಸ್ ನೀರು ಪಾಲಾಗಿವೆ.
ಚಿತ್ರ ತಂಡದ ಕಲಾವಿದರು ಸಾವು ನೋವಿನ ಭೀತಿ, ಆತಂಕದಲ್ಲಿದ್ದಾರೆ. ಕಾಂತಾರ ಚಿತ್ರ ತಂಡವು ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ ಎನ್ನಲಾಗಿದೆ.