ಕಾಂಗ್ರೆಸ್ ಪಕ್ಷ ಗಣತಿ, ಮೀಸಲಾತಿಯ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ

ಕಲಬುರಗಿ:‌ ಕಾಂಗ್ರೆಸ್ ಪಕ್ಷ ಗಣತಿ, ಮೀಸಲಾತಿಯ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲದಕ್ಕಿಂತ ಮೇಲು. ಸಂವಿಧಾನಕ್ಕಿಂತಲೂ ದೊಡ್ಡವರು. ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮೀಸಲಾತಿಯನ್ನು ವಿರೋಧಿಸಿದ್ದರು. ಕಾಂಗ್ರೆಸ್ ಪಕ್ಷದ ಅಧಿನಾಯಕರು ಸಂಸತ್‌ನಲ್ಲಿ ಅತಿದೊಡ್ಡ ಹಾಗೂ ಉದ್ದದ ಭಾಷಣವೇ ಮೀಸಲಾತಿಯನ್ನು ವಿರೋಧಿಸಿ ಮಾತನಾಡಿದ್ದು‌ ಎಂದರು. ಇನ್ನು ಅಹಮದಾಬಾದ್ ವಿಮಾನ ದುರಂತ ನಿಜಕ್ಕೂ ದೊಡ್ಡ ಆಘಾತದ ಕುರಿತು ಭಾರತ ಸರ್ಕಾರದ ನಿಲುವುಗಳನ್ನು ತಿಳಿಸಿದೆನು. ಈ ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. #DGCA ಮತ್ತು ಭಾರತ‌ ಸರ್ಕಾರ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ರೀತಿಯ ಕ್ರಮ ಹಾಗೂ ಮುನ್ನೆಚ್ಚರಿಕೆ ವಹಿಸಲಿದೆ ಎಂದರು.