ಬೆಂಗಳೂರು: ಸ್ವಾವಲಂಬಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಪ್ರೇರಣೆಯಾಗಿರುವ ಕಲಬುರಗಿ ಮಹಿಳೆಯರು ನಿಜಕ್ಕೂ ಸ್ತ್ರೀಶಕ್ತಿಯ ಸಂಕೇತವಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತದ ಸಂಕಲ್ಪ ಸಾಕಾರ ಗೊಳ್ಳುತ್ತಿರುವ ನಿಟ್ಟಿನಲ್ಲಿ ನಿನ್ನೆಯ ಮನದ ಮಾತಿನ (MannKiBaat) ಸರಣಿಯಲ್ಲಿ ಸ್ವತಃ ಮೋದಿಜೀ ಅವರಿಂದಲೇ ಪ್ರಶಂಸೆಗೆ ಒಳಗಾದ ಕಲಬುರಗಿಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳನ್ನು ಅಭಿನಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು
ಕಲ್ಯಾಣ ಕರ್ನಾಟಕದಲ್ಲಿ, ಬಸವಣ್ಣನವರ ಕಾಯಕವೇ ಕೈಲಾಸದ ತತ್ವವನ್ನು ಅನುಸರಿಸಿ ಮೋದಿಜೀ ಅವರ ಸ್ವಾವಲಂಬಿ ಭಾರತ ಕಟ್ಟುವ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸಾಧನೆಯ ಹಾದಿಯಲ್ಲಿ ನಡೆದು ಸ್ವಾವಲಂಬಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಪ್ರೇರಣೆಯಾಗಿರುವ ಕಲಬುರಗಿ ಮಹಿಳೆಯರು ನಿಜಕ್ಕೂ ಸ್ತ್ರೀಶಕ್ತಿಯ ಸಂಕೇತವಾಗಿ ಹೊರಹೊಮ್ಮಿದ್ದಾರೆ.
ಪ್ರಧಾನಿ ಮೋದಿಜೀಯವರ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು 95 ಕೋಟಿಗೂ ಹೆಚ್ಚು ಜನರನ್ನು ತಲುಪಿ ಉತ್ತಮ ಫಲಿತಾಂಶ ಪ್ರತಿಫಲವಾಗಿವೆ. ಇದನ್ನು ಸ್ವತಃ ಪ್ರಧಾನಿಗಳೇ ನಿನ್ನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಸಮೃದ್ಧ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲದ ಸದ್ಬಳಕೆಗೆ ಆದ್ಯತೆ ನೀಡಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಭಾರತದ ಕಟ್ಟ ಕಡೆಯ ಪ್ರಜೆಗೂ ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡುತ್ತಿದೆ.
ಭವಿಷ್ಯತ್ತಿನಲ್ಲಿ ಭಾರತವು ನಿರುದ್ಯೋಗ ರಹಿತ ರಾಷ್ಟ್ರವಾಗಬೇಕು, ಉತ್ಪಾದನೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಂಪನ್ಮೂಲದ ಸಾಗರವಾಗಬೇಕೆನ್ನುವುದು ಪ್ರಧಾನಿಗಳ ಮಹಾ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ, ಸ್ವಾಭಿಮಾನದ ಬದುಕು ರೂಪಿಸಿಕೊಂಡು ವಿಶ್ವದ ಮುಂಚೂಣಿಯಲ್ಲಿ ಭಾರತ ನಂಬರ್ 1 ಸ್ಥಾನದ ಹೆಗ್ಗಳಿಕೆ ಪಡೆಯಲು ಸಂಕಲ್ಪ ತೊಡೋಣ ಎಂದಿದ್ದಾರೆ.