ಕಲಬುರಗಿಯಲ್ಲಿ 9 ಜನ ಪಾಕ್‌ ಪ್ರಜೆಗಳ ವಾಸ: ಗೈಡ್‌ಲೈನ್ ಪ್ರಕಾರ ಹಿಂತಿರುಗಲು ಸೂಚನೆ

ಕಲಬುರಗಿ: ನಗರದಲ್ಲಿ 9 ಜನ ಪಾಕಿಸ್ತಾನ ಪ್ರಜೆಗಳು ಅಧಿಕೃತವಾಗಿ ವಾಸವಾಗಿದ್ದು, ಅವರೆಲ್ಲರನ್ನು ಕೇಂದ್ರ ಸರ್ಕಾರದ ಗೈಡ್‌ಲೈನ್ ಪ್ರಕಾರ ಹಿಂತಿರುಗಲು ಸೂಚನೆ ನೀಡಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಒಟ್ಟು 9 ಜನ ಪಾಕಿಸ್ತಾನ ಪ್ರಜೆಗಳು ವಾಸವಾಗಿದ್ದು, ಅದರಲ್ಲಿ 2 ಜನ ಲಾಂಗ್ ಟರ್ಮ್ ವೀಸಾ ಹೊಂದಿದವರಾಗಿದ್ದಾರೆ. 7 ಜನ ವಿಸಿಟರ್ಸ್ ವೀಸಾ ಹೊಂದಿದವರಾಗಿದ್ದು, ಇವರೆಲ್ಲರೂ ಕಳೆದ 20 ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದು, ಗೈಡ್‌ಲೈನ್ ಪ್ರಕಾರ ಹಿಂತಿರುಗಲು ಸೂಚಿಸಲಾಗಿದೆ ಎಂದು ಹೇಳಿದರು.
7 ಜನ ವಿಸಿಟರ್ಸ್ ವೀಸಾ ಹೊಂದಿದವರಲ್ಲಿ ಒಬ್ಬರು ಮಹಿಳೆ ಅನುಮತಿ ಪಡೆದು ಅಮೆರಿಕಾಗೆ ಟ್ರಾವೆಲ್‌ಗೆ ತೆರಳಿದ್ದು, ಇನ್ನುಳಿದ 6 ಜನರಿಗೂ ನಾವು ಈಗಾಗಲೇ ಮಾಹಿತಿ ನೀಡಿದ್ದು, ಅವರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.