ಕರಡಿ ದಾಳಿ: ಯುವಕನಿಗೆ ಗಾಯ

ಕೂಡ್ಲಿಗಿ: ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ನವೋದಯ ಶಾಲೆಯ ಕಾಪೌಂಡು ಹಿಂಭಾಗದಲ್ಲಿದ್ದ ಕರಡಿಯೊಂದು ಹಠಾತ್ತನೆ ಯುವಕನ ಮೇಲೆ ದಾಳಿ ಮಾಡಿದ ಘಟನೆ ಶನಿವಾರ ಸಂಜೆ:೪-೩೦ಕ್ಕೆ ನಡೆದಿದೆ.
ಆಹಾರ, ನೀರು ಹರಸಿ ಗ್ರಾಮ ಪ್ರವೇಶಿಸಿರಬಹುದಾದ ಕರಡಿಯನ್ನು ಮರಳಿ ಅರಣ್ಯಕ್ಕೆ ಓಡಿಸುವ ಸಂಧರ್ಬದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ, ಸಹಜವಾಗಿ ಕರಡಿ ಗಾಬರಿಗೊಂಡಿದೆ. ಚಿಕ್ಕಜೋಗಿಹಳ್ಳಿ ಗ್ರಾಮದ ೨೪ ವರ್ಷದ ಲೋಹಿತ್ ಎಂಬ ಯುವಕನ ಮೇಲೆ ಎರಗುವ ಮೂಲಕ ಬೆನ್ನಿಗೆ, ಕಾಲಿನ ಭಾಗಕ್ಕೆ ಉಗುರುಗಳಿಂದ ಪರಚಿದೆ. ಗಾಯಗೊಂಡ ಲೋಹಿತ್ ಇವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪರಿಹಾರಕ್ಕೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಂದೀಪ ನಾಯಕ ತಿಳಿಸಿದ್ದಾರೆ.