ಹಾವೇರಿ: ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದು ಶುದ್ಧ ಸುಳ್ಳು. ಕನ್ನಡ ಮತ್ತು ತಮಿಳು ಒಂದೇ ದ್ರಾವಿಡ ಭಾಷೆ. ತಮಿಳು ಎನ್ನುವುದು ತಾಯಿ ಅಥವಾ ತಂದೆ ಎನ್ನುವುದನ್ನು ನಾವು ಒಪ್ಪಲ್ಲ. ಅದು ಸತ್ಯ ಎಂದು ಗೊತ್ತಾದರೂ ನಟರಾದ ಕಮಲ ಹಾಸನ್ ಮೊಂಡುತನ ತೋರಿಸಿದ್ದು ಅವರ ಸಣ್ಣತನದ ನಡವಳಿಕೆ ಎಂದು ನಟ ಚೇತನ್ ಕುಮಾರ್ ಅಹಿಂಸಾ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ ಹಾಸನ್ ಅವರು ಒಳ್ಳೆಯ ಪ್ರತಿಭಾವಂತ ನಟರಾಗಿದ್ದು, ನನಗೆ ಅವರ ಮೇಲೆ ಗೌರವವಿದೆ. ಇವತ್ತಿನ ದಿನ ನಾವೆಲ್ಲಾ ಹೇಳುವುದು ಸತ್ಯವಾಗಿರಬೇಕು. ಸುಳ್ಳು, ಸತ್ಯ ಎಂದು ಗೊತ್ತಾದ ಮೇಲೆ ಸರಿಪಡಿಸಿಕೊಳ್ಳುವ ವಿನಯ ಇರಬೇಕು. ಆದರೆ ಆ ವಿನಯ ಕಮಲ ಹಾಸನ್ ಅವರಲ್ಲಿ ಯಾವುದು ಕಾಣುತ್ತಿಲ್ಲ ಎಂದರು.
ಸುಳ್ಳಿನ ವಿಚಾರದಲ್ಲಿ ಅವರು ಮೆರೆಯಲು ನೊಡುತ್ತಿದ್ದಾರೆ, ಅದನ್ನು ಒಪ್ಪಲ್ಲ. ಇದು ಕನ್ನಡ ಮತ್ತು ತಮಿಳಿನ ಪ್ರಶ್ನೆಯಲ್ಲ. ಸುಳ್ಳು ಮತ್ತು ಸತ್ಯದ ಪ್ರಶ್ನೆಯಾಗಿದೆ. ತಮಿಳುನಾಡಿನ ಕೆಲ ರಾಜಕಾರಣಿಗಳ ಮಾತುಗಳನ್ನು ಸಹ ಕೇಳಿದ್ದೇನೆ. ತೋಲ್ ತಿರುಮಾವಲವನ್ ಅವರು ರಾಬರ್ಟ್ ಕಾಲ್ಡ್ವೆಲ್ ವಿಚಾರ ಪ್ರಸ್ತಾಪಿಸಿದ್ದಾರೆ. 1856 ಲಿಂಗುಷ್ಟಿಕ್ ತಮಿಳು ಕನ್ನಡ ತಾಯಿ ಎನ್ನುವುದು ಹೇಳಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಅದೇ ರಾಬರ್ಟ್ 170 ವರ್ಷದ ಹಿಂದೆ ಬಿಳಿಜನಾಂದವರು ಮತ್ತು ಮೇಲ್ಜಾತಿಯವರೂ ನಮ್ಮ ದ್ರಾವಿಡರಿಗಿಂತ ಶ್ರೇಷ್ಠ ಎಂದಿದ್ದಾರೆ, ಅದನ್ನು ನೀವು ಒಪ್ಪಿಕೊಳೀರಾ? ಎಂದು ಪ್ರಶ್ನಿಸಿದರು.
ತೆಲಗು ಸಾಹಿತ್ಯ ಕನ್ನಡಕ್ಕಿಂತ ಕಡಿಮೆಯಿದೆ ಎನ್ನುವ ಕಾರಣಕ್ಕೆ ಮೂರ್ಖತನ ಮಾತು ಹೇಳಿದರೆ ಅರ್ಥವಿಲ್ಲ. ಈ ವಿಚಾರ ಕರ್ನಾಟಕದ ಜನತೆಗೆ ಭಾವನಾತ್ಮಕವಾಗಿ ನೋವಾಗಿದೆ. ಆದರೂ ನೀವು ಕ್ಷಮೆಯಾಚಿಸಲ್ಲ ಅಂದರೆ ಅದು ಒಳ್ಳೆಯತನವಲ್ಲ ಎಂದರು.
ಕಮಲ್ ಹಾಸನ್ ಲಿಂಗುಷ್ಟಿಕ್ ಸ್ಟಡೀಸ್ ಓದಿಲ್ಲ, ಅಪ್ಲೇಟ್ ಆಗಿಲ್ಲ. ಭಾಷೆ ವಿಚಾರ ಅವರಿಗೆ ಗೊತ್ತಿಲ್ಲ, ಗೊತ್ತಿಲ್ಲದಿದ್ದರೂ ಕ್ಷಮೆಯಾಚಿಸಲ್ಲ ಅಂದರೆ ಅದು ಅವರ ಸಣ್ಣತನ. ಸಹೋದರ-ಸಹೋದರಿ ಭಾಷೆ ಕನ್ನಡ ಮತ್ತು ತಮಿಳು. ಯಾವುದೇ ಕಾರಣಕ್ಕೂ ತಾಯಿ ಮತ್ತು ಮಕ್ಕಳ ಸಂಬಂಧಕ್ಕೆ ಹೋಲಿಕೆ ಮಾಡಿದ್ದು ತಪ್ಪು ಎಂದು ಚೇತನ್ ಹೇಳಿದರು.