ಕಮಲ್ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು

ಬೆಂಗಳೂರು: ನಾನು ಹೇಳಿದ್ದೆ ಸತ್ಯ ಎಂದು ಬೀಗುತ್ತಿರುವ ದುರಹಂಕಾರಿ ಕಮಲ್ ಹಾಸನ್ ಅವರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ತಮಿಳಿನಿಂದಲೇ ಕನ್ನಡ ಎಂದ ನಟ ಕಮಲ್‌ ಹಾಸನ್‌ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದರೆ ಇವರ ವರ್ಚಸ್ಸಿಗೆ ಏನು ಧಕ್ಕೆ ಆಗುತ್ತಿರಲಿಲ್ಲ. ತಲೆ ಬುಡವಿಲ್ಲದ ವಾದವನ್ನು ಮಾಡುತ್ತ ನಾನು ಹೇಳಿದ್ದೆ ಸತ್ಯ ಎಂದು ಬೀಗುತ್ತಿರುವ ದುರಹಂಕಾರಿ ಕಮಲ್ ಹಾಸನ್ ಅವರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು. ನಾಡು, ನುಡಿ, ಜಲ, ಗಡಿ ಬಂದಾಗ ಪಕ್ಷಾತೀತವಾದ, ಧರ್ಮಾತೀತವಾದ ಹೋರಾಟ ಅಗತ್ಯವಿದೆ. ಇಂತಹ ದುರಹಂಕಾರಿಗಳಿಗೆ ಅರ್ಥ ಆಗುವ ಭಾಷೆಯಲ್ಲಿ ಕನ್ನಡಿಗರು ಪಾಠ ಕಲಿಸಬೇಕು. ಕನ್ನಡ ಭಾಷೆಯು ಕ್ರಿ.ಪೂ 3 ನೇ ಶತಮಾನದಲ್ಲೇ ಬಳಕೆಯಲ್ಲಿತ್ತು ಎಂದು ಹಲವು ಸಂಶೋಧಕರು ಹೇಳಿದ್ದಾರೆ. ರಾಷ್ಟ್ರ ಕವಿ ಗೋವಿಂದ ಪೈ ಅವರು ಕ್ರಿ.ಪೂ 2 ನೇ ಶತಮಾನದಿಂದಲೇ ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸಿದ್ದಾರೆ.
ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿತು ಎನ್ನುವ ಭ್ರಮೆಯ ಹೇಳಿಕೆಯು ಕನ್ನಡಿಗರಿಗೆ ಮಾಡಿರುವಂಥ ಅಪಮಾನ. ಇಂತಹ ಮೂಢರನ್ನು ಕನ್ನಡಿಗರು ತಿರಸ್ಕರಿಸಬೇಕು, ಇವರ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡಬಾರದು ಎಂದಿದ್ದಾರೆ.